alex Certify ಹೆಲ್ಮೆಟ್​ ಇಲ್ಲದೇ ಗಾಡಿ ಓಡಿಸುತ್ತಿದ್ದವನಿಗೆ ಕಾರು ಚಾಲಕನಿಂದ ಸಿಕ್ತು ಗಿಫ್ಟ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಲ್ಮೆಟ್​ ಇಲ್ಲದೇ ಗಾಡಿ ಓಡಿಸುತ್ತಿದ್ದವನಿಗೆ ಕಾರು ಚಾಲಕನಿಂದ ಸಿಕ್ತು ಗಿಫ್ಟ್…!

ಆಗ್ರಾ: ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಹೆಲ್ಮೆಟ್ ಇಲ್ಲದೆ ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಬೈಕ್ ಸವಾರನಿಗೆ ರಾಘವೇಂದ್ರ ಕುಮಾರ್ ಎಂಬ ರಸ್ತೆ ಸುರಕ್ಷತಾ ಹೋರಾಟಗಾರ ಉಚಿತ ಹೆಲ್ಮೆಟ್ ನೀಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ.‌

‘ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅವರು ತಮ್ಮ ಕಾರನ್ನು ನಿಲ್ಲಿಸಿ ಅವರಿಗೆ ಹೊಚ್ಚ ಹೊಸ ಹೆಲ್ಮೆಟ್ ನೀಡಿದರು.

‘ಹೆಲ್ಮೆಟ್ ಮ್ಯಾನ್ ಆಫ್ ಇಂಡಿಯಾ’ ಟ್ವಿಟರ್ ಖಾತೆಯ ಹ್ಯಾಂಡಲ್ ಮೂಲಕ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರಾಘವೇಂದ್ರ ಕುಮಾರ್ ತಮ್ಮ ಕಾರನ್ನು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಿರುವುದನ್ನು ತೋರಿಸುತ್ತದೆ ಮತ್ತು ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುತ್ತಿದ್ದ ವ್ಯಕ್ತಿಗೆ ಹೊಚ್ಚಹೊಸ ಹೆಲ್ಮೆಟ್ ಅನ್ನು ತೋರಿಸುವ ಮೂಲಕ ನಿಲ್ಲಿಸುವಂತೆ ಸೂಚಿಸುತ್ತಾರೆ.

ಹೆಲ್ಮೆಟ್ ಅನ್ನು ಹಸ್ತಾಂತರಿಸಿದ ನಂತರ, ರಾಘವೇಂದ್ರ ಅವರು, ಆ ವ್ಯಕ್ತಿಗೆ ಸವಾರಿ ಮಾಡುವಾಗ ಅದನ್ನು ಧರಿಸಲು ಸಲಹೆ ನೀಡುತ್ತಾರೆ. ವ್ಯಕ್ತಿ ತನ್ನನ್ನು ಇಟಾವಾದ ನಿಖಿಲ್ ತಿವಾರಿ ಎಂದು ಪರಿಚಯಿಸಿಕೊಂಡಿದ್ದಾನೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...