alex Certify ಅಪಘಾತ ತಪ್ಪಿಸಲು ಹೋಗಿ ದಿಕ್ಕು ಬದಲಿಸಿದ ಕಾರು ಚಾಲಕ; ರಸ್ತೆ ಬದಿ ನಿಂತವನಿಗೆ ಬಂತು ಗ್ರಹಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಘಾತ ತಪ್ಪಿಸಲು ಹೋಗಿ ದಿಕ್ಕು ಬದಲಿಸಿದ ಕಾರು ಚಾಲಕ; ರಸ್ತೆ ಬದಿ ನಿಂತವನಿಗೆ ಬಂತು ಗ್ರಹಚಾರ

ಅಪಘಾತಗಳೇ ಹಾಗೆ. ಹೇಗೆ ಸಂಭವಿಸುತ್ತದೆ ಎಂದು ತಿಳಿಯುವುದೇ ಕಷ್ಟ. ಅಂಥದ್ದೇ ಒಂದು ಅಪಘಾತ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ನೋಡಿ ಹಲವರು ನಗುತ್ತಿದ್ದರೂ, ಅಪಘಾತದಿಂದ ನೋವು ಅನುಭವಿಸಿದವನಿಗೆ ಮಾತ್ರ ಗೊತ್ತು ಅದರ ಕಷ್ಟ.

ಆಗಿದ್ದೇನೆಂದರೆ, ವೇಗವಾಗಿ ಚಲಿಸುತ್ತಿದ್ದ ಕಾರು ಬಹುತೇಕ ನಿಯಂತ್ರಣ ಕಳೆದುಕೊಂಡು ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆಯುವ ಹಂತದಲ್ಲಿತ್ತು. ಆ ಸಂದರ್ಭದಲ್ಲಿ ಅಪಾಯ ಅರಿತ ಚಾಲಕ, ಕೂಡಲೇ ಸ್ಟೇರಿಂಗ್​ ತಿರುಗಿಸಿ ಕಾರನ್ನು ಮತ್ತೊಂದು ದಿಕ್ಕಿಗೆ ತಿರುಗಿಸಿದ್ದಾನೆ.

ಈ ಸಂದರ್ಭದಲ್ಲಿ ಆತನ ಕಾರು ಸಿಗ್ನಲ್​ ದೀಪದ ಕಂಬಕ್ಕೆ ಡಿಕ್ಕಿ ಹೊಡೆದಿದೆ. ತಾನು ಮತ್ತೊಂದು ವಾಹನಕ್ಕೆ ಅಪಘಾತವಾಗುವುದರಿಂದ ತಪ್ಪಿಸಿಕೊಂಡರೂ ಸಿಗ್ನಲ್​ ಬಳಿ ನಿಂತಿದ್ದ ವ್ಯಕ್ತಿಯ ಗ್ರಹಚಾರ ಮಾತ್ರ ಕೆಟ್ಟಿತ್ತು. ಕಾರು ಸಿಗ್ನಲ್​ ದೀಪದ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಆ ಕಂಬ, ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯ ಮೇಲೆ ಬಿದ್ದಿದೆ. ಇದರ ವೇಗ ಎಷ್ಟು ಇತ್ತೆಂದರೆ ಆ ವ್ಯಕ್ತಿ ಅಲ್ಲಿಯೇ ಬಿದ್ದಿದ್ದಾನೆ. ತಲೆಗೆ ಬಲವಾದ ಏಟು ಬಿದ್ದಿರಬಹುದು ಎಂದು ವಿಡಿಯೋ ನೋಡಿದರೆ ತಿಳಿಯುತ್ತದೆ.

ಇದೇ 26 ರಂದು ಶೇರ್​ ಮಾಡಲಾದ ಈ ವಿಡಿಯೋ ಇದಾಗಲೇ 6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 20,000 ಕ್ಕೂ ಹೆಚ್ಚು ಲೈಕ್ಸ್​ ಪಡೆದುಕೊಂಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...