alex Certify VIRAL VIDEO: ಮೊಬೈಲ್​ನಲ್ಲಿ ಮೈಮರೆತರೆ ಏನೆಲ್ಲಾ ಆಗ್ಬೋದು ಗೊತ್ತಾ ? ಈ ವಿಡಿಯೋವನ್ನೊಮ್ಮೆ ನೋಡಿಬಿಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

VIRAL VIDEO: ಮೊಬೈಲ್​ನಲ್ಲಿ ಮೈಮರೆತರೆ ಏನೆಲ್ಲಾ ಆಗ್ಬೋದು ಗೊತ್ತಾ ? ಈ ವಿಡಿಯೋವನ್ನೊಮ್ಮೆ ನೋಡಿಬಿಡಿ

ನಡೆಯುವಾಗ ಅಥವಾ ಚಾಲನೆ ಮಾಡುವಾಗ ನಾವು ಮೊಬೈಲ್ ಫೋನ್‌ಗಳನ್ನು ಬಳಸುವುದನ್ನು ತಪ್ಪಿಸಬೇಕು ಎಂಬುದು ಗೊತ್ತಿರುವ ವಿಷಯವೇ. ಒಂದು ಸೆಕೆಂಡ್ ಮೊಬೈಲ್​ನಲ್ಲಿ ಮೈಮರೆತರೂ ಅದು ಅಪಘಾತಗಳಿಗೆ ಕಾರಣವಾಗಬಹುದು. ಇಷ್ಟೆಲ್ಲಾ ಎಚ್ಚರಿಕೆಗಳ ನಂತರವೂ, ಅನೇಕ ಜನರು ಈ ಅಭ್ಯಾಸವನ್ನು ಬಿಟ್ಟಿಲ್ಲ.

ಮೊಬೈಲ್​ನಲ್ಲಿ ಮೈಮರೆತರೆ ಏನೆಲ್ಲಾ ಎಡವಟ್ಟುಗಳಾಗಬಹುದು ಎಂಬ ಬಗ್ಗೆ ಕೌಂಟಿ ಶೆರಿಫ್‌ ಎನ್ನುವವರು ಶೇರ್​ ಮಾಡಿಕೊಂಡಿರುವ ಈ ವಿಡಿಯೋದಿಂದ ಅರ್ಥ ಮಾಡಿಕೊಳ್ಳಬಹುದಾಗಿದೆ. ಜನರು ನಡೆಯುವಾಗ ಅಥವಾ ಚಾಲನೆ ಮಾಡುವಾಗ ಫೋನ್‌ಗಳನ್ನು ಬಳಸಿದರೆ ಹೇಗೆಲ್ಲಾ ಅಪಾಯಗಳು ಎದುರಾಗುತ್ತವೆ ಎಂಬ ಬಗ್ಗೆ ಈ ವಿಡಿಯೋ ತೋರಿಸುತ್ತದೆ.

“ಅನೇಕ ಜನರು ನಡೆಯುತ್ತಾ, ಚಾಲನೆ ಮಾಡುತ್ತಾ ಮೆಸೇಜ್​ ಕಳಿಸುತ್ತಿರುತ್ತಾರೆ, ಅಥವಾ ಬಂದ ಮೆಸೇಜ್​ ಓದುತ್ತಿರುತ್ತಾರೆ. ಇಂಥ ಸಂದರ್ಭದಲ್ಲಿ ಅವಘಡಗಳು ಆಗುತ್ತವೆ. ಎಷ್ಟು ಹೇಳಿದರೂ ಇಂಥದ್ದು ನಡೆದೇ ಇದೆ” ಎಂದಿರುವ ಅವರು ಅವಘಡಗಳ ಸಂದೇಶ ಸಾರುವ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. 40-ಸೆಕೆಂಡ್‌ಗಳ ವೀಡಿಯೊ ಭಾರಿ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...