
ಶಾರುಖ್ ಅಭಿನಯದ ಕಲ್ ಹೋ ನಾ ಹೋ ಟ್ರ್ಯಾಕ್ ಯುಕೆಯಲ್ಲಿ ಸ್ಟ್ರೀಟ್ ಪರ್‌ಫಾರ್ಮರ್ ಪ್ರಸ್ತುತಪಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಆ ಪ್ರದರ್ಶಕ ಯುಕೆಯ ಬೀದಿಯಲ್ಲಿ ಭಾವುಕನಾಗಿ ಹಾಡುತ್ತಿದ್ದಾಗ, ಎದುರಿಗಿದ್ದ ಜನ ತಲೆದೂಗುವುದು ಕಾಣಿಸುತ್ತದೆ. ಆತನ ದನಿಗೆ ಮಾರುಹೋದ ಜನರು ಅಲ್ಲಿ ಸುತ್ತಲೂ ಜಮಾಯಿಸಿದರು. ಸೋನು ನಿಗಮ್ ದನಿಯನ್ನೇ ಹೋಲುವಂತೆ ಆತ ಹಾಡು ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ನಂತರ ವಿಡಿಯೋ ಒಂದು ಮಿಲಿಯನ್ ವೀಕ್ಷಣೆ ಕಂಡಿದೆ. ನೂರಾರು ಮಂದಿ ಕಾಮೆಂಟ್ ಮಾಡಿ ಖುಷಿ ವ್ಯಕ್ತಪಡಿಸಿದ್ದಾರೆ.
https://www.instagram.com/reel/CgixtNcDkYI/?utm_source=ig_embed&ig_rid=618fa15f-47e0-40b9-adb0-b66948c7a971