alex Certify ಭಾರತೀಯ ವಾಯುಪಡೆ ಹೆಲಿಕಾಪ್ಟರ್​ ಕ್ರ್ಯಾಶ್​ಲ್ಯಾಂಡ್​…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ವಾಯುಪಡೆ ಹೆಲಿಕಾಪ್ಟರ್​ ಕ್ರ್ಯಾಶ್​ಲ್ಯಾಂಡ್​…..!

ಭಾರತೀಯ ವಾಯುಪಡೆಗೆ ಸೇರಿದ ಎಂಐ – 17 ಹೆಲಿಕಾಪ್ಟರ್​​ ಅರುಣಾಚಲ ಪ್ರದೇಶದ ರೋಚಮ್​ ಹೆಲಿಪ್ಯಾಡ್​​ನಲ್ಲಿ ಕ್ರ್ಯಾಶ್​ಲ್ಯಾಂಡ್​ ಆಗಿದೆ. ಈ ಹೆಲಿಕಾಪ್ಟರ್​ನಲ್ಲಿ ಇಬ್ಬರು ಪೈಲಟ್​ ಹಾಗೂ ಮೂವರು ಸಿಬ್ಬಂದಿ ಇದ್ದರು ಎನ್ನಲಾಗಿದೆ. ಗುರುವಾರ ಈ ಹೆಲಿಕಾಪ್ಟರ್​ ಕ್ರ್ಯಾಶ್​ ಲ್ಯಾಂಡ್​ ಆಗಿದ್ದು ಇದರ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

23 ಸೆಕೆಂಡ್​ಗಳ ವಿಡಿಯೋದಲ್ಲಿ ಐಎಎಫ್​ ಚಾಪರ್​ ತನ್ನ ನಿಯಂತ್ರಣ ಕಳೆದುಕೊಂಡಿದ್ದನ್ನು ಕಾಣಬಹುದಾಗಿದೆ. ನಿಯಂತ್ರಣ ತಪ್ಪಿದ ಹೆಲಿಕಾಪ್ಟರ್​​ ಅರುಣಾಚಲ ಪ್ರದೇಶದ ರೋಚಮ್​ನಲ್ಲಿ ಕ್ರ್ಯಾಶ್​ ಲ್ಯಾಂಡ್​ ಆಗಿದೆ. ಹೆಲಿಕಾಪ್ಟರ್​ನಲ್ಲಿ ಉಂಟಾದ ತಾಂತ್ರಿಕ ದೋಷವೇ ಇದಕ್ಕೆ ಕಾರಣ ಎನ್ನಲಾಗಿದೆ.

ಈ ಹೆಲಿಕಾಪ್ಟರ್​ನ ಮುಖಾಂತರ ಹಯುಲಿಯಾಂಗ್​ನಿಂದ ಚೀನಾ ಹಾಗೂ ಮ್ಯಾನ್ಮಾರ್​ ಗಡಿಯಲ್ಲಿರುವ ಅಂಜಾವ್​ ಜಿಲ್ಲೆಯ ರೋಚಾಮ್​ವರೆಗೆ ಪಡಿತರ ವಿತರಣೆ ಮಾಡಲಾಗುತ್ತಿತ್ತು. ಈ ಅವಘಡದಿಂದಾಗಿ ಹೆಲಿಕಾಪ್ಟರ್​ನಲ್ಲಿದ್ದ ಇಂಜಿನಿಯರ್​ಗೆ ಸಣ್ಣ ಪುಟ್ಟ ಗಾಯಗಳಾಗಿದ್ದರೆ ಪೈಲಟ್​ ಹಾಗೂ ಇತರೆ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...