alex Certify ನಡುರಸ್ತೆಯಲ್ಲೇ ನಾಟಕೀಯ ವಿದ್ಯಾಮಾನ: ಪ್ರಿಯಕರನೊಂದಿಗೆ ಸ್ಕೂಟಿ ರೈಡ್​ ನಲ್ಲಿದ್ದ ಪತ್ನಿಯನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದ ಪತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಡುರಸ್ತೆಯಲ್ಲೇ ನಾಟಕೀಯ ವಿದ್ಯಾಮಾನ: ಪ್ರಿಯಕರನೊಂದಿಗೆ ಸ್ಕೂಟಿ ರೈಡ್​ ನಲ್ಲಿದ್ದ ಪತ್ನಿಯನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದ ಪತಿ…!

“ಪತಿ, ಪತ್ನಿ, ಔರ್​ ವೋ” ಪರಿಕಲ್ಪನೆಯು ಚಲನಚಿತ್ರ ಮೇಲೆ ತಮಾಷೆಯಾಗಿ ಕಂಡುಬಂದರೂ ನಿಜ ಜೀವನದ ಇಂತಹ ಸನ್ನಿವೇಶಗಳು ಅತಿರೇಕಕ್ಕೆ ತಿರುಗಬಹುದು. ರೀಲ್​ನಲ್ಲಿ ಕ್ಷಮೆ, ಪ್ಯಾಚ್​ಅಪ್​ ಅಥವಾ ಮುಂದಕ್ಕೆ ಹೋಗುವ ಪಾಠಗಳನ್ನು ಹೊಂದಿರಬಹುದು, ವಾಸ್ತವವು ಅಷ್ಟು ಸುಲಭವಲ್ಲ.

ಇಂತಹ ಒಂದು ಘಟನೆಗೆ ಉದಾಹರಣೆ ಎಂಬಂತಹ ಪ್ರಸಂಗ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.

ತನ್ನ ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ಚೆನ್ನಾಗಿ ತಿಳಿದಿದ್ದ ಪತಿ, ಆಗ್ರಾದ ಬೀದಿಗಳಲ್ಲಿ ಮತ್ತೊಬ್ಬ ವ್ಯಕ್ತಿಯೊಂದಿಗೆ ತಿರುಗಾಡುತ್ತಿದ್ದ ಆಕೆಯನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅವರಿಬ್ಬರ ನಡುವೆ ಮದುವೆಯಾಗಿ 10 ವರ್ಷಗಳಾಗಿದ್ದು, ಮಗಳು ಸಹ ಇದ್ದಾಳೆ. ಆದರೆ, ಉದ್ಯಮಿಯೊಂದಿಗೆ ತನ್ನ ಹೆಂಡತಿಯ ಅನೈತಿಕ ಸಂಬಂಧದ ಬಗ್ಗೆ ಪತಿಗೆ ತಿಳಿದಾಗಿನಿಂದ ಜಗಳವಾಡುತ್ತಿದ್ದನು. ಆದರೆ ಸೆಪ್ಟೆಂಬರ್​ 11 ಈ ಪ್ರಕರಣ ಮತ್ತೊಂದು ದಿಕ್ಕಿನತ್ತ ಹೊರಳಿತು.

ಪತಿಯೊಂದಿಗೆ ಮಾತಿನ ಚಕಮಕಿ ನಡೆಸಿದ ಬಳಿಕ ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ. ಚಿಂತೆಗೀಡಾದ ತಂದೆ-ಮಗಳು ಇಬ್ಬರು ಅವಳನ್ನು ಹುಡುಕಲು ರಸ್ತೆಯಲ್ಲಿ ಅಲೆದಾಡಿದ್ದರು. ಈ ವೇಳೆ ಕಪ್ಪು ಶರ್ಟ್​ ಮತ್ತು ಬೀಜ್​ ಪ್ಯಾಂಟ್​ ಧರಿಸಿದ್ದ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ. ಬಿಳಿ ಪ್ರಿಂಟೆಡ್​ ಸಲ್ವಾರ್​ ಕುರ್ತಾವನ್ನು ಧರಿಸಿದ್ದ ಮಹಿಳೆ ಅವನ ಹಿಂದೆ ಕುಳಿತಿದ್ದಳು. ಮುಖ ಮುಚ್ಚಿಕೊಳ್ಳಲು ದುಪಟ್ಟಾ ಹಾಗೂ ಸನ್​ಗ್ಲಾಸ್​ ಆಕೆ ಬಳಸಿದ್ದಳು. ಆದರೆ, ಪತಿ ಹಾಗೂ ಮಗಳು ಆಕೆಯನ್ನು ಗುರುತಿಸಿಯೇ ಬಿಟ್ಟರು.

ಮೊದಲು ತನ್ನ ಮುಖ ತೋರಿಸಲು ಪ್ರತಿರೋಧ ತೋರಿಸಿದ್ದು, ಜಗಳಕ್ಕೇ ಇಳಿದಳು. ಇದೆಲ್ಲ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ವಿಡಿಯೋದಲ್ಲಿ ಕಾಣುವಂತೆ ಪತಿಯು ಪತ್ನಿ ಹಾಗೂ ಆಕೆಯ ಪ್ರಿಯಕರನ ಮೇಲೆ ಕೂಗಾಡುತ್ತಿದ್ದ. ತಮ್ಮ ವಾಹನವನ್ನು ವೇಗವಾಗಿ ಓಡಿಸಿಕೊಂಡು ಹೋಗಲು ಆತ ಮುಂದಾದರೂ ಪತಿ ಜೋಡಿಯನ್ನು ಹಿಡಿಯುವಲ್ಲಿ ಯಶಸ್ವಿಯಾದ. ಕೆಲ ಸಮಯದ ನಂತರ, ತನ್ನ ದ್ವಿಚಕ್ರ ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಬೇಕಾಯಿತು.

ಪೊಲೀಸರು ಮಧ್ಯಪ್ರವೇಶಿಸುವ ಮೊದಲು ತನ್ನ ಹೆಂಡತಿಯ ಪ್ರಿಯಕರನಿಗೆ ಅನೇಕ ಬಾರಿ ಕಪಾಳಮೋಕ್ಷ ಕೂಡ ಮಾಡಿದ್ದಾನೆ ಎಂದು ವರದಿಯಾಗಿದೆ. ಸಾರ್ವಜನಿಕ ಶಾಂತಿ ಕದಡುವ ಕಾರಣಕ್ಕಾಗಿ ಇಬ್ಬರಿಗೂ ದಂಡ ವಿಧಿಸಲಾಗಿದೆ. ಮಹಿಳೆ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...