alex Certify VIDEO: ಬುರ್ಜ್ ಅಲ್‌ ಅರಬ್‌ ಹೊಟೇಲ್ ಹೆಲಿಪ್ಯಾಡ್ ಮೇಲೆ ವಿಮಾನ ಲ್ಯಾಂಡಿಂಗ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

VIDEO: ಬುರ್ಜ್ ಅಲ್‌ ಅರಬ್‌ ಹೊಟೇಲ್ ಹೆಲಿಪ್ಯಾಡ್ ಮೇಲೆ ವಿಮಾನ ಲ್ಯಾಂಡಿಂಗ್…!

ದುಬೈನ ಅತ್ಯಂತ ಜನಪ್ರಿಯ ಹೊಟೇಲ್‌ ಬುರ್ಜ್ ಅಲ್ ಅರಬ್‌ ನೆತ್ತಿ ಮೇಲಿರುವ ಹೆಲಿಪ್ಯಾಡ್ ಮೇಲೆ ಹಗುರ ವಿಮಾನವೊಂದನ್ನು ಲ್ಯಾಂಡ್ ಮಾಡಿದ ಪೋಲಿಶ್ ಪೈಲಟ್ ಲ್ಯೂಕ್ ಜ಼ೆಪಿಯೆಲಾ, ಈ ಸಾಧನೆಗೈದ ಮೊದಲಿಗರೆನಿಸಿದ್ದಾರೆ.

ರೆಡ್‌ ಬುಲ್ ಏರ್‌ ರೇಸ್ ಚಾಲೆಂಜರ್‌ ಕ್ಲಾಸ್‌ನ ವಿಶ್ವ ಚಾಂಪಿಯನ್ ಆಗಿರುವ ಲ್ಯೂಕ್ ಇದಕ್ಕಾಗಿ ಎರಡು ವರ್ಷಗಳ ಕಠಿಣ ತಾಲೀಮು ನಡೆಸುತ್ತಾ ಬಂದಿದ್ದಾರೆ.

ಕೇವಲ 27 ಮೀಟರ್‌ ಸ್ಥಳಾವಕಾಶದಲ್ಲಿ ಇಂಥ ಒಂದು ಮೈನವಿರೇಳಿಸುವ ಸ್ಟಂಟ್‌ ಮಾಡಿರುವ ಲ್ಯೂಕ್, ವೈಮಾನಿಕ ಕ್ಷೇತ್ರದಲ್ಲಿ ಅದ್ಭುತವೊಂದನ್ನು ಸಾಧಿಸಿದ್ದಾರೆ.

ಈ ಸ್ಟಂಟ್‌ನ ವಿಡಿಯೋವನ್ನು ರೆಡ್‌ಬುಲ್ ಇನ್‌ಸ್ಟಾಗ್ರಾಂನಲ್ಲಿರುವ ತನ್ನ ಅಧಿಕೃತ ಪುಟದಲ್ಲಿ ಶೇರ್‌ ಮಾಡಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...