alex Certify ಮಚ್ಚು ಬೀಸಿದರೂ ಅಂಜದೆ ಆರೋಪಿಯನ್ನು ಹೆಡೆಮುರಿ ಕಟ್ಟಿದ ಪೊಲೀಸ್;‌ ವಿಡಿಯೋ ಫುಲ್‌ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಚ್ಚು ಬೀಸಿದರೂ ಅಂಜದೆ ಆರೋಪಿಯನ್ನು ಹೆಡೆಮುರಿ ಕಟ್ಟಿದ ಪೊಲೀಸ್;‌ ವಿಡಿಯೋ ಫುಲ್‌ ವೈರಲ್

ಆರೋಪಿಯೊಬ್ಬನನ್ನು ಹಿಡಿಯುವ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ತೋರಿಸಿದ ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಹಿರಿಯ ಪೊಲೀಸ್ ಅಧಿಕಾರಿ ಸ್ವಾತಿ ಲಾಕ್ರಾ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.

ಕೇರಳದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯೊಬ್ಬ ರಸ್ತೆ ಬದಿಯಲ್ಲಿ ತನ್ನ ವಾಹನ ನಿಲ್ಲಿಸಿಕೊಂಡು ನಿಂತಿರುತ್ತಾನೆ. ಆಗ ಪೊಲೀಸ್ ಜೀಪ್ ಒಂದು ನಿಧಾನವಾಗಿ ಬಂದು ಆತನ ಪಕ್ಕದಲ್ಲಿ ನಿಲ್ಲುತ್ತದೆ. ಆಗ ಆರೋಪಿ ಅಲರ್ಟ್ ಆಗುತ್ತಾನೆ.

ಆತನನ್ನು ಹಿಡಿಯಲು ಸಬ್ ಇನ್ಸ್ಪೆಕ್ಟರ್ ವಾಹನದಿಂದ ಕೆಳಗಿಳಿಯುತ್ತಿದ್ದಂತೆ ಆರೋಪಿ ದೊಡ್ಡದಾದ ಮಚ್ಚು ಹಿಡಿದು ಹೇಗೆಂದರೆ ಹಾಗೆ ಬೀಸಿದ್ದಾನೆ. ಇಷ್ಟಾದರೂ ಹೆದರದ ಎಸ್ಐ ಆತನನ್ನು ಹಿಡಿದಿದ್ದಾರೆ.

ಸಬ್ ಇನ್ಸ್ಪೆಕ್ಟರ್ ಹೆಸರು ಅರುಣ್ ಕುಮಾರ್ ಎನ್ನಲಾಗಿದ್ದು ಆರೋಪಿ ಸುಗತನ್ ನನ್ನು ಹಿಡಿದಿದ್ದಾರೆ. ಈ ವೇಳೆ ಮಚ್ಚು ಬೀಸಿದ ಕಾರಣಕ್ಕೆ ಅರುಣ್ ಕುಮಾರ್ ಅವರ ಕೈಗೆ ತೀವ್ರ ಗಾಯವಾದ ಕಾರಣ 7 ಹೊಲಿಗೆಗಳನ್ನು ಹಾಕಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...