alex Certify ಮಾಂಸಹಾರ ಸವಿಯುತ್ತಿರುವ ಪಾಂಡಾದ ದೃಶ್ಯ ಕ್ಯಾಮರಾದಲ್ಲಿ ಸೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಂಸಹಾರ ಸವಿಯುತ್ತಿರುವ ಪಾಂಡಾದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಪಾಂಡಾಗಳು ಮಾಂಸ ತಿನ್ನುತ್ತವೆಯೇ ? ಚೀನಾದಿಂದ ಬಿಡುಗಡೆ ಮಾಡಿದ ಹೊಸ ಫುಟೇಜ್ ಒಂದರಲ್ಲಿ ಪಾಂಡಾವೊಂದು ಮಾಂಸ ತಿನ್ನುತ್ತಿರುವುದನ್ನು ನೋಡಬಹುದಾಗಿದೆ.

ದಕ್ಷಿಣ ಮಧ್ಯ ಚೀನಾದ ಜೈಂಟ್ ರೋಟಂಡ್ ಪಾಂಡಾ ಸಾಮಾನ್ಯವಾಗಿ ಬಿದಿರಿನ ಎಲೆಗಳು ಹಾಗೂ ಕಾಂಡಗಳನ್ನು ತಿಂದುಕೊಂಡು ತಮ್ಮ ಪಥ್ಯದ 99%ರಷ್ಟು ಅಗತ್ಯ ಪೂರೈಸಿಕೊಳ್ಳುತ್ತವೆ. ದಿನವೊಂದರಲ್ಲಿ 10-16 ಗಂಟೆಗಳ ಕಾಲ ತಿನ್ನುವುದರಲ್ಲೇ ಕಾಲ ಕಳೆಯುವ ಈ ಪಾಂಡಾಗಳಿಗೆ ತಮ್ಮ ಹಸಿವು ನೀಗಿಸಿಕೊಳ್ಳಲು ಎರಡು ಬಗೆಯ ಬಿದಿರಿನ ಸಸಿಗಳು ಬೇಕು.

ಟ್ವಿಟರ್‌ನ ಹೊಸ ಸಿಇಓ ಬಗ್ಗೆ ಹೆಮ್ಮೆ ಪಟ್ಟ ಆನಂದ್ ಮಹಿಂದ್ರಾ

ಪಾಂಡಾಗಳ ಜೀರ್ಣಾಂಗ ವ್ಯವಸ್ಥೆಯು ಮಾಂಸಹಾರಿಗಳಿಗಿರುವಂತೆ ಇದ್ದು, ಮಿಕ್ಕ 1%ನಷ್ಟು ಪಥ್ಯವನ್ನು ಮೊಟ್ಟೆಗಳು, ಕಿಡ್ನಿ ಬೀನ್ಸ್‌, ಕುಂಬಳಕಾಯಿಯಂಥ ಪದಾರ್ಥಗಳ ಸೇವನೆಯಿಂದ ನೀಗಿಸಿಕೊಳ್ಳುತ್ತವೆ.

ಆದರೆ, ಚೀನಾದ ಶಾಂಕ್ಸಿ ಪ್ರಾಂತ್ಯದ ವನ್ಯಧಾಮವೊಂದರಲ್ಲಿ ಇರುವ ಈ ಪಾಂಡಾ ಸತ್ತ ಪ್ರಾಣಿಯೊಂದರ ಎಲುಬುಗಳನ್ನು ಹಿಡಿದುಕೊಂಡು ಮಾಂಸ ತಿನ್ನುತ್ತಿರುವುದನ್ನು ನೋಡಬಹುದಾಗಿದೆ.

ಯೂಟ್ಯೂಬ್‌ನಲ್ಲಿರುವ ಸಿಸಿಟಿವಿ ಸುದ್ದಿ ವಾಹಿನಿಯ ಚಾನೆಲ್‌ ಒಂದರಲ್ಲಿ ಈ ವಿಡಿಯೋ ಶೇರ್‌ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...