alex Certify ಟ್ವಿಟರ್‌ನ ಹೊಸ ಸಿಇಓ ಬಗ್ಗೆ ಹೆಮ್ಮೆ ಪಟ್ಟ ಆನಂದ್ ಮಹಿಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟರ್‌ನ ಹೊಸ ಸಿಇಓ ಬಗ್ಗೆ ಹೆಮ್ಮೆ ಪಟ್ಟ ಆನಂದ್ ಮಹಿಂದ್ರಾ

ದೇಶೀ ನೆಟ್ಟಿಗರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಬಹಳವೇ ಕನೆಕ್ಟ್ ಆಗಿರುವ ಮಹಿಂದ್ರಾ & ಮಹಿಂದ್ರಾದ ಚೇರ್ಮನ್ ಆನಂದ್ ಮಹಿಂದ್ರಾ, ಟ್ವಿಟರ್‌ನ ಹೊಸ ಸಿಇಓ ಆಗಿ ನೇಮಕಗೊಂಡ ಪರಾಗ್ ಅಗರ್ವಾಲ್‌ಗೆ ಶುಭಾಶಯ ಕೋರಿದ್ದಾರೆ.

ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಪರಾಗ್‌ರನ್ನು ಅಭಿನಂದಿಸಿದ ಮಹಿಂದ್ರಾ, “ಈ ಒಂದು ಸಾಂಕ್ರಮಿಕ ಭಾರತದಲ್ಲಿ ಉಗಮಿಸಿದೆ ಎಂದು ಹೇಳಲು ನಮಗೆ ಹೆಮ್ಮೆಯೆನಿಸುತ್ತದೆ. ಅದು ಭಾರತೀಯ ಸಿಇಓ ಎಂಬ ವೈರಸ್….. ಇದರ ವಿರುದ್ಧ ಯಾವುದೇ ಲಸಿಕೆ ಇಲ್ಲ,” ಎಂದು ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ವಿಶಿಷ್ಟವಾಗಿ ಟ್ವೀಟ್ ಮಾಡಿದ್ದಾರೆ.

36 ಗಂಟೆಗಳಲ್ಲಿ ಮೂರು ಬಾರಿ ದರೋಡೆಗೆ ಯತ್ನ….!

ಪ್ಯಾಟ್ರಿಕ್ ಕೊಲ್ಲಿಸನ್‌ ಅವರು ಪರಾಗ್‌ಗೆ ಅಭಿನಂದಿಸಿ ಮಾಡಿದ್ದ ಟ್ವೀಟ್‌ ಅನ್ನು ರೀಟ್ವಿಟ್ ಮಾಡಿದ ಆನಂದ್ ಮಹಿಂದ್ರಾ, ಕೋಟ್ ಮಾಡಿದ್ದಾರೆ.

ಟ್ವಿಟರ್‌ ಸಿಇಓ ಸ್ಥಾನದಿಂದ ಕೆಳಗಿಳಿದ ಜಾಕ್ ಡೋರ್ಸೆ ಸ್ಥಾನಕ್ಕೆ ಪರಾಗ್ ಅಗರ್ವಾಲ್‌ರನ್ನು ನೇಮಿಸಲಾಗಿದ್ದು, ಸೋಮವಾರದಿಂದ ಅಧಿಕೃತವಾಗಿ ಸಿಇಓ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...