ಪಾಂಡಾಗಳು ಮಾಂಸ ತಿನ್ನುತ್ತವೆಯೇ ? ಚೀನಾದಿಂದ ಬಿಡುಗಡೆ ಮಾಡಿದ ಹೊಸ ಫುಟೇಜ್ ಒಂದರಲ್ಲಿ ಪಾಂಡಾವೊಂದು ಮಾಂಸ ತಿನ್ನುತ್ತಿರುವುದನ್ನು ನೋಡಬಹುದಾಗಿದೆ.
ದಕ್ಷಿಣ ಮಧ್ಯ ಚೀನಾದ ಜೈಂಟ್ ರೋಟಂಡ್ ಪಾಂಡಾ ಸಾಮಾನ್ಯವಾಗಿ ಬಿದಿರಿನ ಎಲೆಗಳು ಹಾಗೂ ಕಾಂಡಗಳನ್ನು ತಿಂದುಕೊಂಡು ತಮ್ಮ ಪಥ್ಯದ 99%ರಷ್ಟು ಅಗತ್ಯ ಪೂರೈಸಿಕೊಳ್ಳುತ್ತವೆ. ದಿನವೊಂದರಲ್ಲಿ 10-16 ಗಂಟೆಗಳ ಕಾಲ ತಿನ್ನುವುದರಲ್ಲೇ ಕಾಲ ಕಳೆಯುವ ಈ ಪಾಂಡಾಗಳಿಗೆ ತಮ್ಮ ಹಸಿವು ನೀಗಿಸಿಕೊಳ್ಳಲು ಎರಡು ಬಗೆಯ ಬಿದಿರಿನ ಸಸಿಗಳು ಬೇಕು.
ಟ್ವಿಟರ್‌ನ ಹೊಸ ಸಿಇಓ ಬಗ್ಗೆ ಹೆಮ್ಮೆ ಪಟ್ಟ ಆನಂದ್ ಮಹಿಂದ್ರಾ
ಪಾಂಡಾಗಳ ಜೀರ್ಣಾಂಗ ವ್ಯವಸ್ಥೆಯು ಮಾಂಸಹಾರಿಗಳಿಗಿರುವಂತೆ ಇದ್ದು, ಮಿಕ್ಕ 1%ನಷ್ಟು ಪಥ್ಯವನ್ನು ಮೊಟ್ಟೆಗಳು, ಕಿಡ್ನಿ ಬೀನ್ಸ್, ಕುಂಬಳಕಾಯಿಯಂಥ ಪದಾರ್ಥಗಳ ಸೇವನೆಯಿಂದ ನೀಗಿಸಿಕೊಳ್ಳುತ್ತವೆ.
ಆದರೆ, ಚೀನಾದ ಶಾಂಕ್ಸಿ ಪ್ರಾಂತ್ಯದ ವನ್ಯಧಾಮವೊಂದರಲ್ಲಿ ಇರುವ ಈ ಪಾಂಡಾ ಸತ್ತ ಪ್ರಾಣಿಯೊಂದರ ಎಲುಬುಗಳನ್ನು ಹಿಡಿದುಕೊಂಡು ಮಾಂಸ ತಿನ್ನುತ್ತಿರುವುದನ್ನು ನೋಡಬಹುದಾಗಿದೆ.
ಯೂಟ್ಯೂಬ್‌ನಲ್ಲಿರುವ ಸಿಸಿಟಿವಿ ಸುದ್ದಿ ವಾಹಿನಿಯ ಚಾನೆಲ್ ಒಂದರಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ.