alex Certify WATCH: ಕ್ರಿಸ್​ಮಸ್ ಸರ್​ಪ್ರೈಸ್​ ಕೊಡಲು ಕೋಣೆಯನ್ನು ಗಿಫ್ಟ್​ ರ‍್ಯಾಪರ್​ನಲ್ಲಿ ಮುಚ್ಚಿದ ಸ್ನೇಹಿತರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WATCH: ಕ್ರಿಸ್​ಮಸ್ ಸರ್​ಪ್ರೈಸ್​ ಕೊಡಲು ಕೋಣೆಯನ್ನು ಗಿಫ್ಟ್​ ರ‍್ಯಾಪರ್​ನಲ್ಲಿ ಮುಚ್ಚಿದ ಸ್ನೇಹಿತರು….!

ಕ್ರಿಸ್‌ಮಸ್ ಹತ್ತಿರದಲ್ಲಿದೆ, ಹಲವು ದೇಶಗಳಲ್ಲಿ ಈಗ ಭರ್ಜರಿ ತಯಾರಿ ನಡೆಯುತ್ತಿದೆ. ಕ್ರೈಸ್ತರು ತನ್ನ ಕುಟುಂಬಸ್ಥರು ಹಾಗೂ ಸ್ನೇಹಿತರ ಮನರಂಜಿಸಲು ಹೊಸ ಹೊಸ ತಯಾರಿ ನಡೆಸುವುದು ಈ ದಿನಗಳಲ್ಲಿ ಮಾಮೂಲಾಗಿದೆ. ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ.

ಈ ಸಂದರ್ಭದಲ್ಲಿ ತಮಾಷೆ ಮಾಡುವುದು ಮಾಮೂಲು ಆಗಿದೆ. ಸ್ನೇಹಿತರನ್ನು ರಂಜಿಸಲು ಹಲವು ಬಗೆಯ ತಮಾಷೆಗಳನ್ನು ಮಾಡುತ್ತಿರುತ್ತಾರೆ. ಅಂಥದ್ದೇ ವಿಡಿಯೋ ಇದೀಗ ವೈರಲ್​ ಆಗಿದೆ. ತಮ್ಮ ಸ್ನೇಹಿತರ ಕೋಣೆಯನ್ನು ಅಲಂಕಾರ ಮಾಡುವ ಸ್ನೇಹಿತರ ಕುರಿತ ವಿಡಿಯೋ ಇದಾಗಿದೆ.

ರೂಮ್‌ಮೇಟ್‌ಗಳು ತಮ್ಮ ಸ್ನೇಹಿತರ ಕೋಣೆಯನ್ನು ಉಡುಗೊರೆ ರ‍್ಯಾಪರ್​ನಲ್ಲಿ ಪ್ಯಾಕ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಕೋಣೆಯ ಗೋಡೆಗಳು, ಬಾಗಿಲುಗಳು ಮತ್ತು ವಾಡ್​ರೋಬ್​ನಿಂದ ಹಿಡಿದು ಕೋಣೆಯ ನೆಲ, ಪೀಠೋಪಕರಣಗಳು ಮತ್ತು ದಿಂಬುಗಳವರೆಗೆ ಎಲ್ಲವನ್ನೂ ರ‍್ಯಾಪರ್​ನಿಂದ ಮುಚ್ಚುವುದನ್ನು ನೋಡಬಹುದಾಗಿದೆ.

ಈ ತಮಾಷೆಗೆ ನೆಟ್ಟಿಗರು ಖುಷಿ ಪಟ್ಟರೂ, ಇಂಥದ್ದೊಂದು ತಮಾಷೆ ಮಾಡಲು ಮಾಡಿರುವ ಖರ್ಚು ಹಾಗೂ ತೆಗೆದುಕೊಂಡಿರುವ ಸಮಯದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.ಇಷ್ಟೆಲ್ಲಾ ಬೇಕಿತ್ತಾ ಎಂದುಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...