alex Certify ಕುರುಡು ಆನೆಗೆ ಕಣ್ಣಾದ ಮರಿಯಾನೆ..! ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುರುಡು ಆನೆಗೆ ಕಣ್ಣಾದ ಮರಿಯಾನೆ..! ವೈರಲ್​ ಆಯ್ತು ವಿಡಿಯೋ

ಆನೆಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳನ್ನ ನಾವು ಸೋಶಿಯಲ್​ ಮೀಡಿಯಾದಲ್ಲಿ ನೋಡುತ್ತಿರುತ್ತೇವೆ. ಅಲ್ಲದೇ ಅವುಗಳ ಬಗ್ಗೆ ಸಾಕಷ್ಟು ವಿಚಾರಗಳನ್ನೂ ತಿಳಿದುಕೊಂಡಿರ್ತೇವೆ. ಆನೆಗಳು ಮನುಷ್ಯನ ಉತ್ತಮ ಸ್ನೇಹಿತರು, ದಯಾಗುಣ ಹೊಂದಿರುವ ಪ್ರಾಣಿ ಎಂದು ಹೇಳಿದ್ರೆ ತಪ್ಪಾಗಲಿಕ್ಕಿಲ್ಲ.

ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಆನೆಗಳ ಹಿಂಡಿನ ವಿಡಿಯೋವೊಂದು ವೈರಲ್​ ಆಗಿದ್ದು ಆನೆಯ ಉತ್ತಮ ಬುದ್ಧಿಯ ಬಗ್ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಡಿಯೋದಲ್ಲಿ ಮೂರು ಆನೆಗಳು ಇದ್ದಾವೆ. ಇದರಲ್ಲಿ ಒಂದು ಆನೆ ಆಹಾರವನ್ನ ಸೇವಿಸುತ್ತಿದ್ದರೆ, ಹಿಂದೆ ಇದ್ದ ವಯಸ್ಸಾದ ಆನೆಗೆ ದೃಷ್ಟಿದೋಷ ಇದೆ. ಈ ಕುರುಡು ಆನೆಯನ್ನ ಅದರ ಪಾಡಿಗೆ ಹಾಗೆಯೇ ಬಿಡದ ಮರಿಯಾನೆಯೊಂದು ಅದನ್ನ ಆಹಾರ ಸೇವಿಸುವ ಸ್ಥಳಕ್ಕೆ ಕರೆದುಕೊಂಡು ಬಂದಿದೆ.

ಹಿಂಬದಿ ಕಾಲಿನಲ್ಲಿ ಮರಿಯಾನೆ ನಡೆಯುತ್ತಿದ್ದರೆ ಅದರ ಹೆಜ್ಜೆ ಸಪ್ಪಳವನ್ನ ಕೇಳುತ್ತಾ ಕುರುಡು ಆನೆ ಕೂಡ ಹೆಜ್ಜೆ ಹಾಕಿದೆ. ಎಲಿಫಂಟ್​ ನೇಚರ್​ ಪಾರ್ಕ್​ನಲ್ಲಿ ತೆಗೆದ ಈ ವಿಡಿಯೋ ಸಖತ್​ ವೈರಲ್​ ಆಗಿದೆ.

View this post on Instagram

A post shared by Lek Chailert (@lek_chailert)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...