alex Certify ಹಿರಿಯ ಮಹಿಳೆಯ ‘ಕಿಸಿ ಡಿಸ್ಕೋ ಪೇ ಜಾಯೆ……’ ಹಾಡಿನ ನೃತ್ಯಕ್ಕೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ಮಹಿಳೆಯ ‘ಕಿಸಿ ಡಿಸ್ಕೋ ಪೇ ಜಾಯೆ……’ ಹಾಡಿನ ನೃತ್ಯಕ್ಕೆ ನೆಟ್ಟಿಗರು ಫಿದಾ

ಗಾಯನ, ನೃತ್ಯ ಅಥವಾ ಯಾವುದೇ ಕಲೆಗೆ ವಯಸ್ಸಿನ ಹಂಗಿಲ್ಲ. ಇದು ಯಾರನ್ನು ಬೇಕಾದರೂ ಒಲಿಯುತ್ತದೆ. ವಯೋವೃದ್ಧರು ಕೂಡ ವೃದ್ಧಾವಸ್ಥೆಯಲ್ಲಿ ಕೂಡ ಈ ಕಲೆಗಳನ್ನು ಕರಗತ ಮಾಡಿಕೊಳ್ಳಬಹುದಾಗಿದೆ. ಅಂಥದ್ದೇ ಒಂದು ಅಜ್ಜಿಯ ನೃತ್ಯವೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

90 ರ ದಶಕದ ಬಾಲಿವುಡ್​ನ ಹಾಡೊಂದಕ್ಕೆ ವಯಸ್ಸಾದ ಮಹಿಳೆ ನರ್ತಿಸಿದ್ದು, ಅದರ ವಿಡಿಯೋ ವೈರಲ್ ಆಗುತ್ತಿದೆ.  ಬಡೇ ಮಿಯಾನ್ ಚೋಟೆ ಮಿಯಾನ್ ಚಿತ್ರದ ಗೋವಿಂದ ಮತ್ತು ರವೀನಾ ಟಂಡನ್‌ರ ಕಿಸಿ ಡಿಸ್ಕೋ ಮೇ ಜಾಯೆ ಹಾಡಿಗೆ ಈ ವೃದ್ಧೆ ಹೆಜ್ಜೆ ಹಾಕಿದ್ದಾರೆ.

ಕೆಲವೇ ಸೆಕೆಂಡುಗಳ ಈ ವಿಡಿಯೋದಲ್ಲಿ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿದ ವೃದ್ಧೆ ನೆಟ್ಟಿಗರ ಮನ ಗೆದ್ದಿದ್ದಾರೆ. ಕೆಲವರು ಮಾತ್ರ ಈ ವಯಸ್ಸಿನಲ್ಲಿ ಈ ಹಾಡಿಗೆ ನೃತ್ಯ ಏತಕ್ಕೆ ಎಂದು ಕಾಲೆಳೆದಿದ್ದರೆ, ಕೆಲವರು ಈ ವಯಸ್ಸಿನಲ್ಲಿಯೂ ಜೀವನ ಉತ್ಸಾಹವನ್ನು ನೋಡಿ ಕಲಿಯಬೇಕು ಎಂದು ಭೇಷ್​ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...