alex Certify ಸಿನಿಮಾದಲ್ಲಿ ನಾಯಕಿಯನ್ನು ನಾಯಕ ಎತ್ತುವಂತೆ ಪತ್ನಿಯೊಂದಿಗೆ ಅನುಕರಿಸಲು ಹೋದ ಪತಿಗಾಯ್ತು ಫಜೀತಿ ! ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮಾದಲ್ಲಿ ನಾಯಕಿಯನ್ನು ನಾಯಕ ಎತ್ತುವಂತೆ ಪತ್ನಿಯೊಂದಿಗೆ ಅನುಕರಿಸಲು ಹೋದ ಪತಿಗಾಯ್ತು ಫಜೀತಿ ! ವಿಡಿಯೋ ವೈರಲ್​

ಸಂಗೀತ ಮತ್ತು ನೃತ್ಯಕ್ಕೆ ಮನಸೋಲದವರು ಬಹಳ ಕಮ್ಮಿ ಎಂದೇ ಹೇಳಬೇಕು. ಅದರಲ್ಲಿಯೂ ಹಲವು ನವ ವಿವಾಹಿತರಿಗೆ ಜೋಡಿಯಲ್ಲಿ ನೃತ್ಯ ಮಾಡುವುದೆಂದರೆ ತುಂಬಾ ಖುಷಿ. ಸಿನಿಮಾದಲ್ಲಿ ನಾಯಕಿ, ನಾಯಕ ಮಾಡುವಂತೆ ತಾವೂ ಡ್ಯೂಯೆಟ್​ ಮಾಡುವ ಹಂಬಲ ಹಲವರಿಗೆ.
ಆದರೆ ಅವರು ಮಾಡಿದಂತೆ ಮಾಡಲು ಹೋಗಿ ಜೋಡಿಯೊಂದು ಫಜೀತಿಗೆ ಸಿಲುಕಿರುವ ನಕ್ಕು ನಗಿಸುವ ವಿಡಿಯೋ ಒಂದು ವೈರಲ್​ ಆಗಿದೆ.

ಬಹುತೇಕ ಚಿತ್ರಗಳಲ್ಲಿ ನಾಯಕಿಯನ್ನು ನಾಯಕ ಸುಲಭದಲ್ಲಿ ಎತ್ತಿಕೊಂಡು ಹಾಡು ಹಾಡುತ್ತಾನೆ. ಈಚೀಚೆಗೆ ಧಾರಾವಾಹಿಗಳಲ್ಲಿಯೂ ಇದು ಕಾಮನ್​ ಎನಿಸಿದೆ. ಅವರು ಹೀಗೆ ಎತ್ತಿಕೊಳ್ಳುವ ಪೂರ್ವದಲ್ಲಿ ಸಾಕಷ್ಟು ಟ್ರಿಕ್ಸ್​ಗಳನ್ನು ಅನುಸರಿಸಿರುತ್ತಾರೆ.

ಈ ಜೋಡಿಗಳ ಪ್ರೇರಣೆ ಪಡೆದ ಗಂಡನೊಬ್ಬ ತನ್ನ ಪತ್ನಿಯನ್ನು ಎತ್ತಲು ಹೋಗಿ ಇಬ್ಬರು ದಢಾರನೆ ಬಿದ್ದಿರುವ ವಿಡಿಯೋ ಇದಾಗಿದೆ. ಅದೃಷ್ಟವಶಾತ್​ ಇಬ್ಬರಿಗೂ ಯಾವುದೇ ಗಾಯಗಳಾಗಲಿಲ್ಲ. ಎಲ್ಲರೂ ನೋಡಿದರೆನ್ನುವ ಕಾರಣಕ್ಕೆ ಯುವತಿ ಮಾತ್ರ ನಾಚಿ ನೀರಾಗಿದ್ದಾಳೆ. ಅಲ್ಲಿಂದ ಮೇಲಕ್ಕೆ ಎದ್ದೇಳಲು ಇಬ್ಬರೂ ಸಾಕಷ್ಟು ಶ್ರಮ ವಹಿಸಿದ್ದನ್ನೂ ವಿಡಿಯೋದಲ್ಲಿ ನೋಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...