alex Certify ಸೇತುವೆ ಕೆಡವುವ ಸಮಯದಲ್ಲಿ ನೀರಲ್ಲಿ ಮುಳುಗಿದ ಬುಲ್ಡೋಜರ್​, ಚಾಲಕ ಪವಾಡ ಸದೃಶ ಪಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೇತುವೆ ಕೆಡವುವ ಸಮಯದಲ್ಲಿ ನೀರಲ್ಲಿ ಮುಳುಗಿದ ಬುಲ್ಡೋಜರ್​, ಚಾಲಕ ಪವಾಡ ಸದೃಶ ಪಾರು

ಉತ್ತರ ಪ್ರದೇಶದ ಮುಜಾಫರ್​ ನಗರದ ಪಾಣಿಪತ್​-ಖತಿಮಾ ಹೆದ್ದಾರಿಯಲ್ಲಿ 100 ವರ್ಷಗಳಷ್ಟು ಹಳೆಯದಾದ ಗಂಗಾ ಕಾಲುವೆಯ ಸೇತುವೆಯನ್ನು ಕೆಡವುವ ಸಂದರ್ಭದಲ್ಲಿ ಭಾರೀ ಅನಾಹುತವನ್ನು ತಪ್ಪಿದೆ.

ಸೆತುವೆ ಕೆಡವುವ ಪ್ರಕ್ರಿಯೆಯಲ್ಲಿ ಬುಲ್ಡೋಜರ್​ ಬಹುತೇಕ ಕಾಲುವೆಯಲ್ಲಿ ಮುಳುಗಿದ್ದು, ಈ ಘಟನೆಯ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೆೈರಲ್​ ಆಗಿದೆ.

ವೆೈರಲ್​ ವೀಡಿಯೊದಲ್ಲಿ, ಬುಲ್ಡೋಜರ್​ ನೀರಿನಲ್ಲಿ ಮುಳುಗಲು ಸಿಮೆಂಟ್​ ಸೇತುವೆಯಂತೆ ಕಾಣುವ ಮೂಲಕ ಹರಿದು ಹೋಗುವುದನ್ನು ಕಾಣಬಹುದು. ಬುಲ್ಡೋಜರ್​ನಲ್ಲಿದ್ದ ಚಾಲಕ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬುಲ್ಡೋಜರ್​ ಸೇತುವೆಯ ಒಂದು ಭಾಗವನ್ನು ಮಾತ್ರ ಜಖಂಗೊಳಿಸುವ ಗುರಿಯನ್ನು ಹೊಂದಿತ್ತು ಆದರೆ ಬಡಿದ ಹೊಡೆತಕ್ಕೆ ಇಡೀ ಸೇತುವೆ ನೀರಿನಲ್ಲಿ ಮುಳುಗಿತು. ಸೇತುವೆ ಮಾತ್ರವಲ್ಲದೆ ಬುಲ್ಡೋಜರ್​ ಸಹ ಅದರ ಚಾಲಕರೊಂದಿಗೆ ನೀರಿನಲ್ಲಿ ಕೊಚ್ಚಿಹೋಯಿತು. ಘಟನೆ ಸಂಭವಿಸಿದ ಕೂಡಲೇ ಅಕ್ಕಪಕ್ಕದಲ್ಲಿದ್ದವರು ಒಂದು ಕ್ಷಣ ಗಾಬರಿಯಿಂದ ಪರದಾಡುವಂತಾಯಿತು.

ಮಾಧ್ಯಮ ವರದಿಯ ಪ್ರಕಾರ, ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಪಕ್ಕದಲ್ಲಿದ್ದವರು ಬುಲ್ಡೋಜರ್​ ಚಾಲಕನ ಪ್ರಾಣ ರಕ್ಷಣೆಗೆ ಮುಂದಾದರು. ವೀಡಿಯೊದ ಅಂತ್ಯದ ವೇಳೆಗೆ ವಾಹನವು ತಲೆಕೆಳಗಾದಂತೆ ಕಂಡುಬಂತು.

ಸಂಪೂರ್ಣವಾಗಿ ನೀರಿನಲ್ಲಿ‌ಕೊಚ್ಚಿಹೋದ ಹಳೆಯ ಸೇತುವೆ ಸುಮಾರು 100 ವರ್ಷಗಳಷ್ಟು ಹಳೆಯದು. ಮೇಲ್ನೋಟಕ್ಕೆ, ಕೆಡವುವ ಕೆಲಸವು ಕಾಲುವೆಯ ಉದ್ದಕ್ಕೂ ಪಾಣಿಪತ್​-ಖತಿಮಾ ಹೆದ್ದಾರಿಯನ್ನು ವಿಸ್ತರಿಸುವ ಯೋಜನೆಯ ಒಂದು ಭಾಗವಾಗಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...