alex Certify ಮನವಿ ಮಾಡಲು ಬಂದ ಮಹಿಳೆ‌ ಬಳಿ ಠಾಣೆಯಲ್ಲೇ ಮಸಾಜ್‌ ಮಾಡಿಸಿಕೊಂಡ ಪೊಲೀಸ್ ಅಧಿಕಾರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನವಿ ಮಾಡಲು ಬಂದ ಮಹಿಳೆ‌ ಬಳಿ ಠಾಣೆಯಲ್ಲೇ ಮಸಾಜ್‌ ಮಾಡಿಸಿಕೊಂಡ ಪೊಲೀಸ್ ಅಧಿಕಾರಿ…!

ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದ ಮಗನನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲು ಬಂದ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡ ಪೊಲೀಸ್ ಅಧಿಕಾರಿಗೆ ಅಮಾನತಿನ ಶಿಕ್ಷೆಯಾಗಿದೆ.

ಬಿಹಾರದ ಸಹಾರ್ಸಾ ಜಿಲ್ಲೆಯ ನೌಹಟ್ಟಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶಶಿಭೂಷಣ್ ಸಿನ್ಹಾ ಅಮಾನತಿಗೆ ಒಳಗಾಗಿರುವ ಅಧಿಕಾರಿ.

ಮಹಿಳೆಯೊಬ್ಬಳು ಮನವಿ ಮಾಡಲು ಬಂದಾಗ ಈ ಧೂರ್ತ ಆಕೆಯಿಂದ ಮಸಾಜ್ ಮಾಡಿಸಿಕೊಂಡಿದ್ದಾನೆ. ಈ ದೃಶ್ಯಗಳನ್ನು ವಿಡಿಯೋ ಮಾಡಿರುವ ಪತ್ರಕರ್ತರೊಬ್ಬರು ಸಾಮಾಜಿಕ ಮಾಧ್ಯಮಗಳಿಗೆ ಅಪ್ ಲೋಡ್ ಮಾಡಿದ್ದಾರೆ.

ಈ ವಿಡಿಯೋ ವೈರಲ್ ಆಗಿದ್ದು, ಅರೆ ನಗ್ನಾವಸ್ಥೆಯಲ್ಲಿದ್ದ ಪೊಲೀಸಪ್ಪನ ದುರ್ವರ್ತನೆಗೆ ಸಾಕಷ್ಟು ಟೀಕೆ, ಆಕ್ರೋಶಗಳು ವ್ಯಕ್ತವಾಗಿವೆ.

ಪರಿಸ್ಥಿತಿಯನ್ನು ಮನಗಂಡ ಬಿಹಾರ ಪೊಲೀಸ್ ಇಲಾಖೆ ಶಶಿಭೂಷಣ್ ಸಿನ್ಹಾ ಅವರನ್ನು ಅಮಾನತು ಮಾಡಿ ತನಿಖೆಗೆ ಆದೇಶ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...