alex Certify ಫುಲ್ ಚಾರ್ಜ್​ ಕೇಳಿದ್ದಕ್ಕೆ ಕಂಡಕ್ಟರ್​ ಮೇಲೆ ಹಿಗ್ಗಾಮುಗ್ಗಾ ಹಲ್ಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫುಲ್ ಚಾರ್ಜ್​ ಕೇಳಿದ್ದಕ್ಕೆ ಕಂಡಕ್ಟರ್​ ಮೇಲೆ ಹಿಗ್ಗಾಮುಗ್ಗಾ ಹಲ್ಲೆ

ಬಸ್​ ಪ್ರಯಾಣದ ಸಂದರ್ಭದಲ್ಲಿ ಟಿಕೆಟ್​ ದರ ಅಥವಾ ಚಿಲ್ಲರೆ ವಿಷಯದಲ್ಲಿ ಕಂಡಕ್ಟರ್​, ಪ್ರಯಾಣಿಕರ ನಡುವೆ ಸಣ್ಣಪುಟ್ಟ ಜಗಳ ನಡೆಯುವುದು ಸಾಮಾನ್ಯ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಬಸ್​ ಕಂಡಕ್ಟರ್​ ಪೂರ್ಣ ಚಾರ್ಜ್​ ಕೊಡಿ ಎಂದು ಪ್ರಯಾಣಿಕನನ್ನು ಕೇಳಿದ್ದೇ ತಪ್ಪಾಯ್ತು, ಥಳಿತಕ್ಕೊಳಗಾಗಿದ್ದಾನೆ.

ಮಧ್ಯಪ್ರದೇಶದ ಭೋಪಾಲ್​ನಲ್ಲಿ ಪ್ರಯಾಣ ದರದ ಬಗ್ಗೆ ವಾದ – ವಿವಾದದ ನಂತರ ಪ್ರಯಾಣಿಕರೊಬ್ಬರು ಬಸ್​ ಕಂಡಕ್ಟರ್​ಗೆ ಥಳಿಸಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಎನ್​ಸಿಸಿ ಕೆಡೆಟ್​ ಆಗಿರುವ ಪ್ರಯಾಣಿಕ ಪೊಲೀಸ್​ ಪ್ರಧಾನ ಕಚೇರಿಗೆ ಬೋರ್ಡ್​ ಕಚೇರಿಯ ಬಳಿ ಬಸ್​ ಹತ್ತಿದ್ದ, ಟಿಕೆಟ್​ ದರ 5 ರೂಪಾಯಿ ವ್ಯತ್ಯಾಸದ ಬಗ್ಗೆ ಕಂಡಕ್ಟರ್​ ಹಾಗೂ ಆತನ ನಡುವೆ ವಾಗ್ವಾದ ನಡೆಯಿತು. ಪ್ರಯಾಣ ದರ 15 ರೂ. ಇದ್ದು, ಆ ಎನ್​ಸಿಸಿ ಕೆಡೆಟ್​ ಕಂಡಕ್ಟರ್​ಗೆ 10 ಮಾತ್ರ ನೀಡಿ ಅದರಲ್ಲೇ ಕರೆದೊಯ್ಯುವಂತೆ ಒತ್ತಾಯಿಸಿದ್ದ.

ಬಳಿಕ ಜಗಳ ತಾರಕಕ್ಕೆ ಹೋಗಿದ್ದು, ಆ ಎನ್​ಸಿಸಿ ಕೆಡೆಟ್​ ಕಂಡಕ್ಟರ್​ಗೆ ಥಳಿಸಿ, ಚಲಿಸುತ್ತಿದ್ದ ಬಸ್​ನಿಂದ ಹಾರಿ ಸ್ಥಳದಿಂದ ಓಡಿ ಹೋಗಿದ್ದಾನೆ. ಬಸ್​ ಕಂಡಕ್ಟರ್​ನನ್ನು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು.

ಈ ಜಗಳದ ಸನ್ನಿವೇಶ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೈರಲ್​ ಆಗಿದೆ. ಬಸ್​ ಸೇವೆಯನ್ನು ನಡೆಸುವ ಸಂಸ್ಥೆಯು ಸಿಸಿಟಿವಿ ದೃಶ್ಯಗಳನ್ನು ಪೊಲೀಸರಿಗೆ ಹಸ್ತಾಂತರಿಸಿದೆ. ಜಹಾಂಗೀರಾಬಾದ್​ ಪೊಲೀಸ್​ ಠಾಣೆಯಲ್ಲಿ ಎನ್​ಸಿಸಿ ಕೆಡೆಟ್​ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...