ಒರಾಂಗುಟನ್ ಒಂದು ಗಾಜಿನ ಶೀಲ್ಡ್ ಮೂಲಕವೇ ತನ್ನ ಹೊಟ್ಟೆಗೆ ಮುತ್ತಿಕ್ಕಿದ ಭಾವುಕ ಕ್ಷಣವೊಂದನ್ನು ಅನುಭವಿಸಿದ ಇಂಗ್ಲೆಂಡ್‌ನ ಗರ್ಭಿಣಿ ಮಹಿಳೆಯೊಬ್ಬರು ಆನಂದಭಾಷ್ಪ ಸುರಿಸಿದ್ದಾರೆ.
ಗ್ಲೌಸೆಸ್ಟರ್‌ಶೈರ್‌ನ ನವೋಮಿ ಡೇವಿಸ್ ಹೆಸರಿನ 34 ವರ್ಷದ ಈ ಮಹಿಳೆ ಲೀಸೆಸ್ಟರ್‌ಶೈರ್‌ನ ಟ್ವೈಕ್ರಾಸ್ ಮೃಗಾಲಯಕ್ಕೆ ಪತಿ ಬೆನ್ ಬಿಲ್ಲಿಂಗ್ ಹ್ಯಾಮ್ ಜೊತೆಗೆ ಭೇಟಿ ಕೊಟ್ಟಿದ್ದರು. ಆ ವೇಳೆ ಮಂಗಗಳ ವಿಭಾಗದತ್ತ ಬಂದ ನವೋಮಿಗೆ, ಒರಾಂಗುಟನ್ ಒಂದು ತನ್ನ ತಾಯಿಯ ಹೆಗಲ ಮೇಲೆ ನಿಂತು ಗಾಜಿನ ಪರದೆ ಮೂಲಕವೇ ನವೋಮಿಯ ಗರ್ಭಧಾರಿತ ಹೊಟ್ಟೆಗೆ ಮುತ್ತಿಕ್ಕಿದೆ.
ಸಕ್ಕರೆಗಿಂತ ‘ಬೆಲ್ಲ’ ಆರೋಗ್ಯಕ್ಕೆ ಬೆಸ್ಟ್ ಯಾಕೆ ಗೊತ್ತಾ….?
ಈ ವೇಳೆ ನಾಲ್ಕು ತಿಂಗಳ ಗರ್ಭವತಿಯಾಗಿದ್ದ ನವೋಮಿಗೆ ತನ್ನ ಹೊಟ್ಟೆಯನ್ನು ಒರಾಂಗುಟನ್‌ಗೆ ತೋರಲು ಆಕೆಯ ಪತಿ ತಿಳಿಸಿದ್ದಾರೆ.
“ಗರ್ಭಧಾರಣೆ ಬಗ್ಗೆ ಒರಾಂಗುಟನ್ ಗಳಿಗೆ ಅರಿವಿರುತ್ತದೆ ಎಂದು ನನಗೆ ಗೊತ್ತೇ ಇರಲಿಲ್ಲ. ಆದರೆ ಈ ಮರಿ ನನ್ನ ಹೊಟ್ಟೆಗೆ ಮುತ್ತಿಕ್ಕಲು ಆರಂಭಿಸಿತು. ಅದು ನಿಜಕ್ಕೂ ಸುಂದರ ಕ್ಷಣವಾಗಿತ್ತು — ನಾನು ಸ್ವಲ್ಪ ಭಾವುಕಳಾದೆ” ಎಂದು ನವೋವಿ ತಮ್ಮ ಅನುಭವದ ಬಗ್ಗೆ ತಿಳಿಸಿದ್ದಾರೆ.