alex Certify ಐಸ್​ ಬ್ಲಾಕ್​ ಮೇಲೆ ಅದ್ಬುತ ಭಾವಚಿತ್ರ ರಚಿಸಿದ ಕಲಾವಿದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಸ್​ ಬ್ಲಾಕ್​ ಮೇಲೆ ಅದ್ಬುತ ಭಾವಚಿತ್ರ ರಚಿಸಿದ ಕಲಾವಿದ

ಕಲಾವಿದನ ಸೃಜನಶೀಲತೆಗೆ ಯಾವುದೇ ಮಿತಿ ಇರುವುದಿಲ್ಲ. ಇಲ್ಲೊಬ್ಬ ಕಲಾವಿದ ಸಮುದ್ರದ ನಡುವೆ ತೇಲುವ ಮಂಜುಗಡ್ಡೆ ಮೇಲೆ ಭಾವಚಿತ್ರ ರಚಿಸಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕಲಾವಿದ ಡೇವಿಡ್​ ಪೋಪಾ ಬಾಲ್ಟಿಕ್​ ಸಮುದ್ರದಲ್ಲಿ ಈ ಸಾಹಸ ಮಾಡಿದ್ದು, ಸಾಮಾನ್ಯ ಬಣ್ಣಗಳ ಬದಲಿಗೆ, ಕಲಾಕೃತಿಯನ್ನು ಸೆಳೆಯಲು ಇದ್ದಿಲು ಮತ್ತು ಮಣ್ಣನ್ನು ಬಳಸಿದ್ದಾರೆ.

ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಲಾದ ವಿಡಿಯೊವು 29 ವರ್ಷದ ಕಲಾವಿದನ ಅಸಾಧಾರಣ ಪ್ರತಿಭೆಯನ್ನು ತೋರುತ್ತದೆ.

ಪೋಪಾ ಅವರ ಭಾವಚಿತ್ರಗಳ ಏರಿಯಲ್​ ವ್ಯೂ ಕಾಣಿಸುತ್ತದೆ. ಅಲ್ಲಿ ಅವರು ಬೃಹತ್​ ಮಂಜುಗಡ್ಡೆಯ ಮೇಲೆ ನಿಂತು ಕಲಾಕೃತಿಯನ್ನು ಚಿತ್ರಿಸುತ್ತಿದ್ದಾರೆ. ಮಂಜುಗಡ್ಡೆಯ ಸಣ್ಣ ತುಂಡುಗಳನ್ನು ಜೋಡಿಸಿ ಮುಖದ ಆಕಾರ ನೀಡಿದ್ದು, ಸೌಂದರ್ಯವನ್ನು ಹೆಚ್ಚಿಸುತ್ತದೆ.

ಈ ಸಾಹಸ ಮಾಡುವ ಮೊದಲು ಅವರು ಎರಡು ಚಳಿಗಾಲ ಭಾವಚಿತ್ರವನ್ನು ಈ ರೀತಿ ಚಿತ್ರಿಸಲು ಅಭ್ಯಾಸ ಮಾಡಿದರು. ಪೋಪಾ ಪ್ರಕಾರ, ಚಿತ್ರಕಲೆ ಸುಮಾರು ಶೂನ್ಯ-ಡಿಗ್ರಿ ತಾಪಮಾನದಲ್ಲಿ ಮಾತ್ರ ಚೆನ್ನಾಗಿ ಹೊರಹೊಮ್ಮುತ್ತದೆ. ಹಿಂದಿನ ಚಳಿಗಾಲದ ಪರಿಸ್ಥಿತಿಗಳಲ್ಲಿನ ಪ್ರಯತ್ನ ಅವರಿಗೆ ಫಲಪ್ರದವಾಗಿವೆ.

ಪೋಪಾ ಅವರು ಸಂಪೂರ್ಣ ಡ್ರೈಸ್ಯೂಟ್​ ಧರಿಸಿದ್ದರು ಮತ್ತು ಡ್ರೋನ್​ ಸೇರಿದಂತೆ ಎಲ್ಲಾ ಉಪಕರಣಗಳನ್ನು ಹೊತ್ತುಕೊಂಡು ನೀರಿನಲ್ಲಿ ಈಜಿ ಅಲ್ಲಿಗೆ ತೆರಳಿದ್ದರು.

ಭಾವಚಿತ್ರಗಳನ್ನು ಅಲ್ಪಕಾಲಿಕ ಕಲೆ ಎಂದು ಕರೆಯಲಾಗುತ್ತದೆ ಮತ್ತು ಕಣ್ಮರೆಯಾಗುವ ಮೊದಲು ಒಂದು ಕ್ಷಣ ಮಾತ್ರ ಇರುತ್ತದೆ. ಚಿತ್ರಕಲೆಯ ಜೊತೆಗೆ ಮಂಜುಗಡ್ಡೆ ದೂರ ಸರಿಯುವ ಅಥವಾ ಮುಳುಗುವ ಮೊದಲು ಸರಿಸುಮಾರು ನಾಲ್ಕು ಗಂಟೆಗಳ ಒಳಗೆ ಕಲಾಕೃತಿಯನ್ನು ರಚಿಸಲು ಪೋಪಾ ಪ್ರಯತ್ನಿಸಿದ್ದರು.

ಆದರೆ, ಮುಗಿದ ಭಾವಚಿತ್ರವು ಸ್ವಲ್ಪ ಸಮಯದ ನಂತರ ಕಣ್ಮರೆಯಾದಾಗಲೂ, ಪೋಪಾ ಅವರ ಪ್ರಯತ್ನಗಳು ವ್ಯರ್ಥವಾಗಲಿಲ್ಲ. ಅವರು ಈ ಭಾವಚಿತ್ರದ ಸುಮಾರು 100 ಮುದ್ರಿತ ಚಿತ್ರಗಳನ್ನು ಮಾರಾಟ ಮಾಡಲು ಸಾಧ್ಯವಾಗಿದೆ. ಜೊತೆಗೆ, ಅವರು ಕಲೆಯನ್ನು ವೀಡಿಯೊಗಳು ಅಂದಾಜು ರೂ. 11.97 ಲಕ್ಷ ಗಳಿಸಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...