
ಕೃತಕ ಬುದ್ಧಿಮತ್ತೆ ಎನ್ನುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಚಿತ್ರಕಲೆಯಲ್ಲೂ ಸಹ ಕೃತಕ ಬುದ್ಧಿಮತ್ತೆಯ ಪಾತ್ರ ದಿನೇ ದಿನೇ ವಿಸ್ತಾರವಾಗುತ್ತಾ ಸಾಗಿದೆ.
ಕೃತಕ ಬುದ್ಧಿಮತ್ತೆ ಬಳಸಿಕೊಂಡು ರಚಿಸಿದ ಸುಂದರವಾದ ಚಿತ್ರಗುಚ್ಛವೊಂದನ್ನು ಉದ್ಯಮಿ ಆನಂದ್ ಮಹಿಂದ್ರಾ ಶೇರ್ ಮಾಡಿಕೊಂಡಿದ್ದಾರೆ.
“ಕೃತಕ ಬುದ್ಧಿಮತ್ತೆ ಬಳಸಿ ರಚಿಸಲಾದ ಈ ಚಿತ್ರಗುಚ್ಛದಲ್ಲಿ 5 ವರ್ಷದ ಬಾಲಕಿಯೊಬ್ಬಳು ತನ್ನ 95ನೇ ವಯಸ್ಸಿನವರೆಗೂ ಆಗುವ ಬದಲಾವಣೆಗಳನ್ನು ನೋಡಬಹುದಾಗಿದೆ.
ಮಾನವರ ಇಂಥ ಸುಂದರ ಚಿತ್ರಗಳನ್ನು ರಚಿಸುವುದಾದರೆ ನಾನು ಕೃತಕ ಬುದ್ಧಿಮತ್ತೆಯ ಶಕ್ತಿಯ ಬಗ್ಗೆ ಅಂಜುವುದಿಲ್ಲ,” ಎಂದು ಆನಂದ್ ಮಹಿಂದ್ರಾ ಚಿತ್ರದ ವಿಡಿಯೋದೊಂದಿಗೆ ಹೇಳಿಕೊಂಡಿದ್ದಾರೆ.