alex Certify ಬಾಯೊಳಗೆ ಗನ್​ನಿಂದ ಶೂಟ್​ ಮಾಡಿಕೊಂಡು ಉಗುಳುವ ಯೋಧ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯೊಳಗೆ ಗನ್​ನಿಂದ ಶೂಟ್​ ಮಾಡಿಕೊಂಡು ಉಗುಳುವ ಯೋಧ: ವಿಡಿಯೋ ವೈರಲ್​

ಕೆಲವರು ರಾತ್ರೋರಾತ್ರಿ ಹೀರೊಗಳಾಗಲು ಹುಚ್ಚು ಸಾಹಸ ಮಾಡುವುದು ಇದೆ. ಕೆಲವೊಮ್ಮೆ ಈ ಸಾಹಸಗಳು ಪ್ರಾಣಕ್ಕೆ ಅಪಾಯವನ್ನು ಉಂಟು ಮಾಡುವ ಸಾಧ್ಯತೆ ಇದ್ದರೆ, ಕೆಲವೊಮ್ಮೆ ಅಚ್ಚರಿ ಎನ್ನುವಂಥ ರೀತಿಯಲ್ಲಿ ಸಾಹಸ ಕಾರ್ಯಗಳನ್ನು ಮಾಡುವುದು ಉಂಟು.

ಅಂಥದ್ದೇ ವಿಡಿಯೋ ಒಂದು ಈಗ ವೈರಲ್​ ಆಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ರೈಫಲ್ ಮತ್ತು ಕೈಯಿಂದ ಬಂದೂಕಿನಿಂದ ತನ್ನ ಬಾಯಿಗೆ ಗುಂಡು ಹಾರಿಸಿಕೊಳ್ಳುತ್ತಿರುವುದನ್ನು ನೋಡಬಹುದು. ಕೆಲವು ಸೆಕೆಂಡುಗಳ ನಂತರ, ಮಿಲಿಟರಿ ಉಡುಪಿನಲ್ಲಿರುವ ವ್ಯಕ್ತಿ ಗುಂಡುಗಳ ಚಿಪ್ಪುಗಳನ್ನು ಉಗುಳುವುದನ್ನು ನೋಡಬಹುದು.

ಮೊದಲಿಗೆ ದೊಡ್ಡ ಗನ್​ನಿಂದ ಬಾಯಿಗೆ ಹೊಡೆದುಕೊಂಡು ನಂತರ ಬುಲೆಟ್​ ಉಗುಳಿದ್ದಾನೆ, ನಂತರ ಸಣ್ಣ ಪಿಸ್ತೂಲ್​ ಅನ್ನು ತಮ್ಮ ಬಾಯಿಗೆ ಗುರಿಯಾಗಿಟ್ಟುಕೊಂಡು ಟಪ್​ ಎಂದು ಬೆಂಕಿ ಹಾಕಿಸಿಕೊಂಡು ನಂತರ ಬುಲೆಟ್​ ಅನ್ನು ಎಸೆದಿದ್ದಾನೆ.

ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ತಲ್ಲಣ ಸೃಷ್ಟಿಸಿದೆ. ಹಲವರು ಇದನ್ನು ನಕಲಿ ಗನ್​ ಎಂದು ಹೇಳಿದ್ದಾರೆ. ವೀಡಿಯೊವನ್ನು ನೀವೊಮ್ಮೆ ವೀಕ್ಷಿಸಿ ನಿಜವೋ ಅಲ್ಲವೋ ಎಂದು ಬೇಕಿದ್ದರೆ ಹೇಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...