alex Certify ಫ್ಲಿಪ್ ಬೌನ್ಸ್-ಪಾಸ್ ರಿಲೇ ಆಟದಲ್ಲಿ ಹೊಸ ದಾಖಲೆ: ಬೆರಗಾಗಿಸುವ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ಲಿಪ್ ಬೌನ್ಸ್-ಪಾಸ್ ರಿಲೇ ಆಟದಲ್ಲಿ ಹೊಸ ದಾಖಲೆ: ಬೆರಗಾಗಿಸುವ ವಿಡಿಯೋ ವೈರಲ್

ಪ್ರಪಂಚದಾದ್ಯಂತದ ಜನರು ಇದುವರೆಗೆ ಕೆಲವು ಅಸಾಮಾನ್ಯ ವಿಶ್ವ ದಾಖಲೆಗಳನ್ನು ಸ್ಥಾಪಿಸಿದ್ದಾರೆ. ದಾಖಲೆಗಳು ಯಾವುದೂ ಹೊಸತು ಸಿಗದಿದ್ದರೆ, ಹಳೆಯ ದಾಖಲೆಗಳನ್ನೇ ಮತ್ತೊಮ್ಮೆ ಪರಿಶೀಲಿಸಿ ಆ ದಾಖಲೆ ಮುರಿಯಬಹುದೇ ಎಂದು ಯೋಚನೆಯಲ್ಲಿ ತೊಡಗುತ್ತಾರೆ.

ಅಂಥದ್ದೇ ಒಂದು ವಿಶ್ವ ದಾಖಲೆಯನ್ನು ಬರೆದಿದೆ ಹಂಗೇರಿಯ ಫೇಸ್ ಟೀಮ್ ಅಕ್ರೋಬ್ಯಾಟಿಕ್ ಸ್ಪೋರ್ಟ್ಸ್ ಥಿಯೇಟರ್. ಬರಾನಿ ಫ್ಲಿಪ್ ಬೌನ್ಸ್-ಪಾಸ್ ರಿಲೇ ಆಟದಲ್ಲಿ ಹೊಸ ದಾಖಲೆಯನ್ನು ಈ ತಂಡ ಬರೆದಿದೆ. ಈ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದೆ.

2020ರ ಆಗಸ್ಟ್ 10ರಂದು ಒಟ್ಟು ಮೂವತ್ತೈದು ಜನರು ಈ ದಾಖಲೆಯನ್ನು ಸ್ಥಾಪಿಸಿದ್ದು ಅದೀಗ ವೈರಲ್​ ಆಗಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ದಾಖಲೆಯ ಬಗ್ಗೆ ಶೇರ್​ ಮಾಡಿಕೊಂಡಿದೆ. ಬಾಸ್ಕೆಟ್‌ಬಾಲ್ ನೆಟ್​ ಸಮೀಪ ಜಿಮ್ ಮ್ಯಾಟ್ ಅಳವಡಿಸಲಾಗಿದೆ. ಈ ಮ್ಯಾಟ್​ಗೆ ರೀಚ್​ ಆಗುವ ಮೊದಲು ಆಟಗಾರರು ಹೇಗೆಲ್ಲಾ ಸರ್ಕಸ್​ ಮಾಡುತ್ತಾರೆ ಎಂಬ ಬಗ್ಗೆ ವಿಶೇಷವಾಗಿ ಈ ವಿಡಿಯೋದಲ್ಲಿ ತೋರಿಸಲಾಗಿದೆ. ಇದನ್ನು ನೋಡಿ ನೆಟ್ಟಿಗರು ಹುಬ್ಬೇರಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...