alex Certify ಹಾವನ್ನು ಕಂಡ ವ್ಯಕ್ತಿ ಮಾಡಿದ ಕೆಲಸ ಕಂಡು ನಕ್ಕ ನೆಟ್ಟಿಗರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾವನ್ನು ಕಂಡ ವ್ಯಕ್ತಿ ಮಾಡಿದ ಕೆಲಸ ಕಂಡು ನಕ್ಕ ನೆಟ್ಟಿಗರು..!

ಹಾವಿನ ಹೆಸರು ಕೇಳಿದ್ರೆ ಸಾಕು. ಮೈ ಎಲ್ಲಾ ಝುಂ ಅನ್ನುತ್ತೆ..! ಅಂತದ್ರಲ್ಲಿ ಹಾವೇ ಕಣ್ಣೆದುರು ಬಂದು ಬಿಟ್ರೆ..? ಅಬ್ಬಾ ಆ ಭಯವನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ವಿಡಿಯೋವೊಂದರಲ್ಲಿ ಹಾವನ್ನು ಕಂಡು ವ್ಯಕ್ತಿಯೊಬ್ಬ ಸ್ಥಳದಿಂದ ಕಾಲ್ಕಿತ್ತ ದೃಶ್ಯವಂತೂ ನೆಟ್ಟಿಗರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುವಲ್ಲಿ ಯಶಸ್ವಿಯಾಗಿದೆ.

ಥೈಲ್ಯಾಂಡ್​ನಲ್ಲಿ ನಡೆದ ಘಟನೆ ಇದಾಗಿದ್ದು ವ್ಯಕ್ತಿಯೊಬ್ಬ ಡೈನಿಂಗ್​ ಟೇಬಲ್​ ಹಾಗೂ ಖುರ್ಚಿಯು ಇದ್ದ ಜಾಗಕ್ಕೆ ಬರುತ್ತಾನೆ. ಟೇಬಲ್​ನ್ನು ಅಚ್ಚುಕಟ್ಟಾಗಿ ಇಡಲು ವ್ಯಕ್ತಿ ಮುಂದಾಗುತ್ತಿದ್ದಂತೆಯೇ ಏಕಾ ಏಕಿ ಹಾವು ಪ್ರತ್ಯಕ್ಷವಾಗಿದೆ. ಇದನ್ನು ಕಂಡ ವ್ಯಕ್ತಿಯು ತಬ್ಬಿಬ್ಬಾಗಿದ್ದು ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...