alex Certify Watch: ಜಿಪ್​ ಲೈನ್​ನಲ್ಲಿ ಸವಾರಿ ಮಾಡಿ ದಾಖಲೆ ಬರೆದ ವೃದ್ಧೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch: ಜಿಪ್​ ಲೈನ್​ನಲ್ಲಿ ಸವಾರಿ ಮಾಡಿ ದಾಖಲೆ ಬರೆದ ವೃದ್ಧೆ

ಕೆಲವರಿಗೆ ವಯಸ್ಸು ಅವರ ಕನಸಿಗೆ ಅಡ್ಡಿಯಾಗುವುದಿಲ್ಲ. ಇದನ್ನು ಸಾಬೀತು ಪಡಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಆಗುತ್ತಲೇ ಇರುತ್ತವೆ.

ಅಂಥದ್ದೇ ಇನ್ನೊಂದು ವಿಡಿಯೋ ವೈರಲ್​ ಆಗಿದೆ. ಕೇರ್ ಹೋಮ್‌ನಲ್ಲಿ ವಾಸಿಸುತ್ತಿರುವ 85 ವರ್ಷದ ವೃದ್ಧೆಯೊಬ್ಬರು ವಿಶ್ವದ ಅತ್ಯಂತ ವೇಗದ ಜಿಪ್ ಲೈನ್​ನಲ್ಲಿ ಸವಾರಿ ಮಾಡಿ ದಾಖಲೆ ಮಾಡಿದ್ದಾರೆ.

ಸ್ಯಾಲಿದೇ ವೆಬ್‌ಸ್ಟರ್ ಎಂಬ ಮಹಿಳೆ ತಮ್ಮ ಮಗಳು ಜೂಲಿಯೆಟ್‌ ರೊಂದಿಗೆ 1.5 ಕಿಮೀ ಉದ್ದ ಮತ್ತು 500 ಅಡಿ ಎತ್ತರದ ಜಿಪ್‌ಲೈನ್‌ನಲ್ಲಿ ಹಾರಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಟ್ವಿಟ್ಟರ್‌ನಲ್ಲಿ ರಾಯಿಟರ್ಸ್ ಈ ವಿಡಿಯೋ ಶೇರ್​ ಮಾಡಿಕೊಂಡಿದೆ.

ವೃದ್ಧೆಯು ರಕ್ಷಣಾತ್ಮಕ ಗೇರ್ ಮತ್ತು ಕನ್ನಡಕಗಳನ್ನು ಧರಿಸಿ, ಜಿಪ್-ಲೈನಿಂಗ್ ಮೇಲೆ ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.

ವೃದ್ಧೆಯ ಮಗಳು, 52 ವರ್ಷದ ಯೋಗ ಶಿಕ್ಷಕಿಯಾಗಿದ್ದು, ಪಕ್ಕದಲ್ಲಿ ಜಿಪ್-ಲೈನಿಂಗ್ ನಲ್ಲಿ ಅವರನ್ನೂ ಕಾಣಬಹುದು. ಈ ವಿಡಿಯೋಗೆ ಜನರು ಥರಹೇವಾರಿ ಕಮೆಂಟ್​ ಮಾಡುತ್ತಿದ್ದಾರೆ. ಮೆಚ್ಚುಗೆ ವ್ಯಕ್ತಪಡಿಸಿ ವೃದ್ಧೆಯನ್ನು ಅಭಿನಂದಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...