alex Certify ಅಂಚೆ ಕಛೇರಿಯಲ್ಲಿ ಹೂಡಿಕೆ ಮಾಡುವ ಮುನ್ನ ನಿಮಗಿದು ತಿಳಿದಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಚೆ ಕಛೇರಿಯಲ್ಲಿ ಹೂಡಿಕೆ ಮಾಡುವ ಮುನ್ನ ನಿಮಗಿದು ತಿಳಿದಿರಲಿ

ನಿವೃತ್ತಿ ನಂತರ ಆದಾಯದ ಬಗ್ಗೆ ಚಿಂತಿಸುತ್ತಿದ್ದೀರಾ? ಯೋಚಿಸಬೇಡಿ – ನಿವೃತ್ತಿ ನಂತರ ಹಣ ಹೂಡಲು ಅಂಚೆ ಇಲಾಖೆಯಲ್ಲಿ ಸಾಕಷ್ಟು ಉತ್ತಮ ಯೋಜನೆಗಳನ್ನು ತಂದಿವೆ. ಉತ್ತಮ ಗಳಿಕೆ ತರುವಂತಹ ಅನೇಕ ರೀತಿಯ ಯೋಜನೆಗಳು ಅಲ್ಲಿವೆ.

ಈ ಯೋಜನೆಗಳು ಸುರಕ್ಷತೆ ಜೊತೆಗೆ ಉತ್ತಮ ಹಣ ಗಳಿಸಿಕೊಡುತ್ತದೆ. ಅಂಚೆ ಇಲಾಖೆಯು ಅತ್ಯಂತ ಸುರಕ್ಷಿತ ಯೋಜನೆಗಳನ್ನು ತರುತ್ತಿದ್ದು, ಜನರು ಯೋಚನೆಯಿಲ್ಲದೆ ಇದರಲ್ಲಿ ಬಂಡವಾಳ ಹಾಕಬಹುದು ಎಂಬ ಮಾತಿದೆ.

ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್: ಇಂಜಿನಿಯರಿಂಗ್ ಕಾಲೇಜುಗಳಲ್ಲೂ ಪದವಿಗೆ ಅವಕಾಶ – ಈ ವರ್ಷವೇ ಬಿಎಸ್ಸಿಗೆ ಪ್ರವೇಶ

ಅಂಚೆ ಇಲಾಖೆಯು ತಿಂಗಳ ಆದಾಯ ಯೋಜನೆ ತಂದಿದ್ದು, ಹೂಡಿಕೆ ಮಾಡುವವರು ಒಟ್ಟಿಗೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಬೇಕು.

ಈ ಯೋಜನೆಯಲ್ಲಿ ಒಬ್ಬರೇ ಅಥವಾ ಜಂಟಿ ಖಾತೆ, ಅಪ್ರಾಪ್ತ ವಯಸ್ಸಿನವರು ಕೂಡ ಬಳಸಬಹುದಾಗಿದೆ. ಇದರಲ್ಲಿ ಖಾತೆ ತೆಗೆಯುವವರು ಒಂದು ಸಾವಿರ ರೂ. ನಿಂದ ಪ್ರಾರಂಭಿಸಬಹುದು. ಅಲ್ಲದೆ ಖಾತೆ ತೆಗೆಯುವವರು ಒಬ್ಬರೆ ಆದಲ್ಲಿ ಗರಿಷ್ಠ 4.5 ಲಕ್ಷ , ಜಂಟಿಯಾಗಿದ್ದಲ್ಲಿ ಗರಿಷ್ಠ 9 ಲಕ್ಷ ಹೂಡಬಹುದು.

ಇದರ ಬಡ್ಡಿಯು ಖಾತೆ ತೆರೆದ ಒಂದು ತಿಂಗಳ ನಂತರದಲ್ಲಿ ಸಿಗಲಾರಂಭಿಸುತ್ತದೆ. ಖಾತೆ ಒಮ್ಮೆ ತೆರೆದರೆ 5 ವರ್ಷಗಳ ಕಾಲ ಮುಕ್ತಾಯಗೊಳಿಸಲು ಆಗುವುದಿಲ್ಲ. ಒಂದು ವೇಳೆ ಮುಂಚಿತವಾಗಿ ಹಣ ತೆಗೆಯಬೇಕಿದ್ದರೆ, ಸ್ವಲ್ಪ ಹಣ ಕಡಿತಗೊಳಿಸಲಾಗುತ್ತದೆ.

ಇದರಲ್ಲಿ ಬಂಡವಾಳ ಹೂಡಿಕೆಮಾಡಿದವರಿಗೆ ವಾರ್ಷಿಕವಾಗಿ ಶೇಕಡಾ 6.6 ಬಡ್ಡಿ ಸಿಗುತ್ತದೆ ಎಂದು ತಿಳಿಸಲಾಗಿದೆ.

ಖಾತೆ ತೆರೆಯ ಬಯಸುವವರು ಸಮೀಪದ ಅಂಚೆ ಕಚೇರಿಗೆ ಹೋಗಬೇಕು, ಆಧಾರ್ ಕಾರ್ಡ್ ಅಥವಾ ಪಾಸ್ ಪೋರ್ಟ್, ಓಟರ್ ಕಾರ್ಡ್ ಇರಬೇಕು. ಇದರೊಂದಿಗೆ ಎರಡು ಭಾವ ಚಿತ್ರಗಳು ಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...