alex Certify ವೇಟ್ರೆಸ್ ಕೆಲಸ ಕಿತ್ತುಕೊಂಡ $44,000 ಟಿಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇಟ್ರೆಸ್ ಕೆಲಸ ಕಿತ್ತುಕೊಂಡ $44,000 ಟಿಪ್

ಪಡೆದುಕೊಂಡ ಸೇವೆಗೆ ಪ್ರತಿಯಾಗಿ ಸ್ವಲ್ಪ ದುಡ್ಡನ್ನು ಮೆಚ್ಚುಗೆಯ ರೂಪದಲ್ಲಿ ಕೊಡುವುದೇ ಟಿಪ್. ಕೆಲಸಗಾರರನ್ನು ಚಿಯರ್‌ ಅಪ್ ಮಾಡಲು ನೀಡುವ ಬೋನಸ್ ಎಂದರೂ ತಪ್ಪಾಗಲಾರದು.

ಸಾಮಾನ್ಯವಾಗಿ ರೆಸ್ಟೋರೆಂಟ್‌ಗಳಲ್ಲಿ ವೇಟರ್‌ಗಳು ತಮ್ಮ ಸೇವೆಗಾಗಿ ಗ್ರಾಹಕರಿಂದ ಟಿಪ್ ಪಡೆಯುತ್ತಾರೆ. ಪ್ರತಿಯೊಬ್ಬರೂ ಹೀಗೆ ಟಿಪ್ ನೀಡುತ್ತಾರೆ ಎನ್ನಲು ಬರುವುದಿಲ್ಲ. ಆದರೆ ಕೆಲವೊಂದು ವೇಟರ್‌ಗಳ ನಸೀಬು ಸಿಕ್ಕಾಪಟ್ಟೆ ಚೆನ್ನಾಗಿದ್ದಾಗ ಅವರಿಗೆ ಗಿರಾಕಿಗಳು ಒಳ್ಳೆ ಟಿಪ್‌ಅನ್ನೇ ಕೊಡುತ್ತಾರೆ. ಬಹುತೇಕ ಎಲ್ಲರಿಗೂ ಟಿಪ್ ಸಿಗುವುದು ಒಂದು ರೀತಿಯ ಒಳ್ಳೆಯ ಸುದ್ದಿಯೇ.

ಆದರೆ ಇಲ್ಲೊಬ್ಬರಿಗೆ ಇದೇ ವಿಚಾರ ಕೆಲಸ ಕಳೆದುಕೊಳ್ಳುವಂತೆ ಮಾಡಿದೆ.

ಅರ್ಕಾನ್ಸಾಸ್‌ನ ರ‍್ಯಾನ್ ಬ್ರಾಂಟ್ ಹೆಸರಿನ ಈ ವೇಟ್ರೆಸ್‌‌ಗೆ ಗ್ರಾಹಕರು $44,000 (ಮೂರು ಲಕ್ಷ ರೂ) ಟಿಪ್ ನೀಡಿದ್ದು, ಅದೀಗ ಆಕೆಯ ಕೆಲಸಕ್ಕೇ ಕುತ್ತು ತಂದಿದೆ. ಇಲ್ಲಿನ ಬೆಂಟನ್‌ವಿಲ್ಲೆಯ ಓವನ್ ಅಂಡ್ ಟ್ಯಾಪ್ ರೆಸ್ಟೋರೆಂಟ್‌ಗೆ ಆಗಮಿಸಿದ್ದ 40ಕ್ಕೂ ಹೆಚ್ಚಿನ ಮಂದಿಯ ಗುಂಪೊಂದಕ್ಕೆ ಬ್ರಾಂಟ್ ಮತ್ತು ಆಕೆಯ ಸಹೋದ್ಯೋಗಿಯೊಬ್ಬರು ಸರ್ವ್ ಮಾಡಿದ್ದಾರೆ.

ಮಹಾರಾಷ್ಟ್ರದ ರುಚಿಯಾದ ಖಾದ್ಯ ಸವಿದ ಸಚಿನ್ ತೆಂಡೂಲ್ಕರ್: ವೈರಲ್ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 5.5 ಮಿಲಿಯನ್ ಮಂದಿ..!

ಗುಂಪಿನಲ್ಲಿದ್ದ ಪ್ರತಿಯೊಬ್ಬರೂ ತಲಾ $100 ಟಿಪ್ ಬಿಟ್ಟು ಹೋಗಿದ್ದು, ಅದೆಲ್ಲಾ ಸೇರಿ $4,400 ಆಗಿದೆ.

ಆದರೆ ಇಲ್ಲೇ ನೋಡಿ ಎಡವಟ್ಟು ಶುರುವಾಗಿದ್ದು.

ವರದಿಗಳ ಪ್ರಕಾರ, ಆ ಟಿಪ್‌ಅನ್ನು ರೆಸ್ಟೋರೆಂಟ್‌ನಲ್ಲಿರುವ ಇತರ ಕೆಲಸಗಾರರೊಂದಿಗೆ ಹಂಚಿಕೊಳ್ಳಬೇಕೆಂದು ಅಲ್ಲಿನ ಮ್ಯಾನೇಜ್ಮೆಂಟ್ ತಾಕೀತು ಮಾಡಿದೆ. ಬ್ರಾಂಟ್ ಹಿಂದೆಂದೂ ಈ ರೀತಿ ಟಿಪ್ ಹಂಚಿಕೊಳ್ಳುವ ಪ್ರಸಂಗ ಎದುರಿಸಿರಲಿಲ್ಲ. ಹೀಗೆ ಮಾಡಿದಲ್ಲಿ, ಬ್ರಾಂಟ್‌ಗೆ ಒಟ್ಟಾರೆ ಟಿಪ್‌ನ 20%ನಷ್ಟು ಮಾತ್ರವೇ ಉಳಿಯಲಿತ್ತು.

ಪಾರ್ಟಿ ಆಯೋಜಿಸಿದ್ದ ಗ್ರಾಂಟ್ ವೈಸ್ ಖುದ್ದು ರೆಸ್ಟೋರೆಂಟ್‌ಗೆ ಕರೆ ಮಾಡಿ, ತಾವು ಟಿಪ್ ಕೊಟ್ಟ ದುಡ್ಡು ಪಾರ್ಟಿಯಲ್ಲಿ ಸರ್ವ್‌ ಮಾಡಿದವರಿಗೆ ಮಾತ್ರವೇ ಕೊಡಬೇಕು ಎಂದಿದ್ದಲ್ಲದೇ ಆ ದುಡ್ಡನ್ನು ಬ್ರಾಂಟ್‌ಗೆ ನೀಡಲು ತಾಕೀತು ಮಾಡಿದ್ದಾರೆ.

ಆದರೆ ಇದಕ್ಕೆ ಒಪ್ಪದ ರೆಸ್ಟೋರೆಂಟ್‌, ಬ್ರಾಂಟ್‌ರನ್ನು ಕೆಲಸದಿಂದ ತೆಗೆದು ಹಾಕಿದ್ದು, ಆಕೆ ಕಂಪನಿಯ ನೀತಿ ಉಲ್ಲಂಘನೆ ಮಾಡಿದ್ದಾರೆ ಎಂದು ಕಾರಣ ಕೊಟ್ಟಿದೆ.

ಇದೀಗ ಬ್ರಾಂಟ್ ನೆರವಿಗೆ ಬಂದಿರುವ ವೈಸ್, ಆಕೆಗಾಗಿ ನಿಧಿ ಸಂಗ್ರಹಣಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...