alex Certify ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಕಡ್ಡಾಯ: ಮನೆಯಲ್ಲೇ ಆಧಾರ್ ಲಿಂಕ್ ಮಾಡಲು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಕಡ್ಡಾಯ: ಮನೆಯಲ್ಲೇ ಆಧಾರ್ ಲಿಂಕ್ ಮಾಡಲು ಇಲ್ಲಿದೆ ಮಾಹಿತಿ

ಬೆಂಗಳೂರು: ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಣೆ ಮಾಡಬೇಕೆಂದು ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ. ಭಾರತ ಚುನಾವಣೆ ಆಯೋಗದ ಆದೇಶದ ಅನ್ವಯ ಎಲ್ಲಾ ಮತದಾರರು ಆಧಾರ್ ಜೋಡಣೆ ಮಾಡಬೇಕಿದ್ದು, ಮನೆಯಲ್ಲೇ ಕುಳಿತು ಆಧಾರ್ ಜೋಡಣೆ ಮಾಡಿಕೊಳ್ಳಲು ಅವಕಾಶವಿದೆ.

ಇದಕ್ಕಾಗಿಯೇ ಪ್ರತ್ಯೇಕ ಆಪ್ ಅಭಿವೃದ್ಧಿಪಡಿಸಲಾಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ವೋಟರ್ ಹೆಲ್ಪ್ ಲೈನ್ ಆಪ್ ಎಂದು ನಮೂದಿಸಿ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಬೇಕು. ಆಪ್ ಕೆಳಗಡೆ ಎಡಬದಿಯಲ್ಲಿ ಎಕ್ಸ್ ಪ್ಲೋರ್ ಆಯ್ಕೆ ಮಾಡಿ ಕ್ಲಿಕ್ ಮಾಡಬೇಕು. ನಂತರ ಎಲೆಕ್ಟ್ರೋರಲ್ ಅಥೆಂಟಿಕೇಶನ್ ಫಾರಂ 6 ಬಿ ಆಯ್ಕೆ ಮಾಡಬೇಕು. ಮೊಬೈಲ್ ನಮೂದಿಸಿದಲ್ಲಿ ಒಟಿಪಿ ಬರಲಿದ್ದು, ಒಟಿಪಿ ನಮೂದಿಸಿದ ನಂತರ ವೆರಿಫೈ ಕ್ಲಿಕ್ ಮಾಡಬೇಕು. ಚುನಾವಣೆ ಗುರುತಿನ ಚೀಟಿ ಹಾಕಿದ ನಂತರ ರಾಜ್ಯವನ್ನು ಆಯ್ಕೆ ಮಾಡಿ, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಗ್ರಾಮದ ಹೆಸರು ಹಾಕಿ ದೃಢೀಕರಣ ನಂಬರ್ ಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...