alex Certify 300 ರೂ. ಗಿಂತ ಕಡಿಮೆ ಬೆಲೆಗೆ ವೋಡಾಫೋನ್ ನೀಡ್ತಿದೆ 4ಜಿಬಿ ಡೇಟಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

300 ರೂ. ಗಿಂತ ಕಡಿಮೆ ಬೆಲೆಗೆ ವೋಡಾಫೋನ್ ನೀಡ್ತಿದೆ 4ಜಿಬಿ ಡೇಟಾ

ಟೆಲಿಕಾಂ ಕ್ಷೇತ್ರದಲ್ಲಿ ಬೆಲೆ ಯುದ್ಧ ಮುಂದುವರೆದಿದೆ. ಟೆಲಿಕಾಂ ಕಂಪನಿಗಳು ಕಡಿಮೆ ಬೆಲೆಗೆ ಯೋಜನೆಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತವೆ. ವೋಡಾಫೋನ್ ಐಡಿಯಾ ಕೂಡ ಇದ್ರಿಂದ ಹಿಂದೆ ಬಿದ್ದಿಲ್ಲ. ವಿಐ ಕೂಡ 300 ರೂಪಾಯಿಗಿಂತ ಕಡಿಮೆ ಬೆಲೆಗೆ 4ಜಿಬಿ ಡೇಟಾ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡ್ತಿದೆ.

ವಿಐ 299 ರೂಪಾಯಿ  ಪ್ಲಾನ್ ನಲ್ಲಿ 28 ದಿನಗಳ ಮಾನ್ಯತೆ ಸಿಗುತ್ತದೆ. ಯೋಜನೆಯಲ್ಲಿ ಪ್ರತಿದಿನ 4ಜಿಬಿ ಡೇಟಾ ಲಭ್ಯವಿದೆ. ಒಟ್ಟು 112 ಜಿಬಿ ಡೇಟಾ ಲಭ್ಯವಿದೆ. ಉಚಿತ ಅನಿಯಮಿತ ಕರೆ, ದಿನಕ್ಕೆ 100 ಎಸ್ಎಂಎಸ್ ಲಭ್ಯವಿದೆ. ಈ ಯೋಜನೆಯಲ್ಲಿ ರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಅನಿಯಮಿತ ಇಂಟರ್‌ನೆಟ್ ಬಳಸಬಹುದು. ಇದಲ್ಲದೇ, ವಿಐ ಮೂವಿಸ್ ಮತ್ತು ಟಿವಿ ಕ್ಲಾಸಿಕ್ ನ ಚಂದಾದಾರಿಕೆಯೂ ಲಭ್ಯವಿದೆ.

ಜಿಯೋದ 349 ರೂಪಾಯಿ ಯೋಜನೆಯಲ್ಲಿ, ಪ್ರತಿದಿನ 3ಜಿಬಿ ಡೇಟಾ ಸಿಗುತ್ತದೆ. ಅನಿಯಮಿತ ಕರೆ, ದಿನಕ್ಕೆ 100 ಎಸ್ಎಂಎಸ್ ಸಿಗುತ್ತಿದೆ. ಇನ್ನು ಏರ್ಟೆಲ್ 398 ರೂಪಾಯಿ ಯೋಜನೆಯಲ್ಲಿ 28 ದಿನಗಳ ಸಿಂಧುತ್ವವಿದ್ದು, 3ಜಿಬಿ ಡೇಟಾ  ಸಿಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...