alex Certify ವೊಡಾಫೋನ್ – ಐಡಿಯಾದಿಂದ ನಾಲ್ಕು ಬಂಪರ್ ಯೋಜನೆ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೊಡಾಫೋನ್ – ಐಡಿಯಾದಿಂದ ನಾಲ್ಕು ಬಂಪರ್ ಯೋಜನೆ ಬಿಡುಗಡೆ

ಟೆಲಿಕಾಂ ಕ್ಷೇತ್ರದಲ್ಲಿ ಬೆಲೆ ಸಮರ ಸಾಮಾನ್ಯ. ಬೇರೆ ಕಂಪನಿಗಳಿಗೆ ಟಕ್ಕರ್ ನೀಡಲು ಈಗ ವೊಡಾಫೋನ್-ಐಡಿಯಾ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ನಾಲ್ಕು ಸ್ಮಾರ್ಟ್ ಯೋಜನೆಗಳನ್ನು ಪರಿಚಯಿಸಿದೆ. ಹೊಸ ವಿಐ ಪ್ಲಾನ್‌ಗಳ ಬೆಲೆ 155, 239, 666 ಮತ್ತು 699 ರೂಪಾಯಿಯಾಗಿದೆ.  ಕೆಲ ದಿನಗಳ ಹಿಂದಷ್ಟೆ ಯೋಜನೆಗಳ ಬೆಲೆ ಏರಿಕೆ ಮಾಡಿದ್ದ ವಿಐ ಈಗ ಹೊಸ ಪ್ಲಾನ್ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದೆ.

ವಿಐನ 155  ರೂಪಾಯಿ ಯೋಜನೆ 24 ದಿನಗಳ  ಸಿಂಧುತ್ವ ಹೊಂದಿದೆ. ಇದರಲ್ಲಿ ಬಳಕೆದಾರರಿಗೆ 1ಜಿಬಿ ಡೇಟಾ, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮತ್ತು 300 ಎಸ್ಎಂಎಸ್ ಲಭ್ಯವಿದೆ.

24 ದಿನಗಳ ವ್ಯಾಲಿಡಿಟಿಯು ವಿಐನ 239 ರೂಪಾಯಿ ಯೋಜನೆಯಲ್ಲಿ  ಪ್ರತಿ ದಿನ 1ಜಿಬಿ ಡೇಟಾ ಲಭ್ಯವಿದೆ. ಅನಿಯಮಿತ ಕರೆ ಹಾಗೂ 100 ಎಸ್ಎಂಎಸ್ ಸಿಗಲಿದೆ. ಇನ್ನು 666  ರೂಪಾಯಿ ಯೋಜನೆಯಲ್ಲಿ 77 ದಿನಗಳ ಮಾನ್ಯತೆಯೊಂದಿಗೆ ದಿನಕ್ಕೆ 1.5ಜಿಬಿ ಡೇಟಾ ನೀಡಲಾಗುವುದು. ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್  ಲಭ್ಯವಿದೆ. ಡೇಟಾ ಡಿಲೈಟ್ ಆಫರ್ ಮತ್ತು ವೀಕೆಂಡ್ ಡೇಟಾ ರೋಲ್‌ಓವರ್ ಇದ್ರಲ್ಲಿ ಲಭ್ಯವಿದೆ.

ಇನ್ನು ವಿಐನ  699 ರೂಪಾಯಿ ಯೋಜನೆಯು 56 ದಿನಗಳ ಸಿಂಧುತ್ವ ಹೊಂದಿದೆ. ಇದರಲ್ಲಿ ಪ್ರತಿದಿನ 3ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ಸಿಗಲಿದೆ. ಬಿಂಜ್ ಆಲ್ ನೈಟ್, ಡೇಟಾ ಡಿಲೈಟ್ ಆಫರ್ ಮತ್ತು ವೀಕೆಂಡ್ ಡೇಟಾ ರೋಲ್‌ಓವರ್ ಸೌಲಭ್ಯ ಸಿಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...