alex Certify ದೃಷ್ಟಿಹೀನ ಕ್ರೀಡಾಪಟು ತಮ್ಮ ದೈನಂದಿನ ಕೆಲಸ ನಿರ್ವಹಿಸುವ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೃಷ್ಟಿಹೀನ ಕ್ರೀಡಾಪಟು ತಮ್ಮ ದೈನಂದಿನ ಕೆಲಸ ನಿರ್ವಹಿಸುವ ವಿಡಿಯೋ ವೈರಲ್

ದೃಷ್ಟಿಹೀನ ಕ್ರೀಡಾಪಟುವೊಬ್ಬರು ತಮ್ಮ ಪ್ರತಿದಿನದ ಕಾರ್ಯಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಬಹಿರಂಗಪಡಿಸುವ ವಿಡಿಯೋ ವೈರಲ್ ಆಗಿದೆ. ಇದು ಹಲವರ ಹೃದಯಗಳನ್ನು ಗೆದ್ದಿದೆ.

ಆಂಥೋನಿ ಪ್ಯಾರಾಲಿಂಪಿಕ್ ಅಥ್ಲೀಟ್ ಆಗಿದ್ದು, ಅವರು ಜೂಡೋದಲ್ಲಿ ಯುಎಸ್ಎ ಯನ್ನು ಪ್ರತಿನಿಧಿಸುತ್ತಾರೆ. ಅವರು ತಮ್ಮ ವಿಡಿಯೊಗಳಿಗಾಗಿ ಇನ್‌ಸ್ಟಾಗ್ರಾಮ್ ಸೆನ್ಸೇಶನ್ ಆಗಿದ್ದಾರೆ.

ವಿಡಿಯೋದಲ್ಲಿ ಅವರು ಮನೆಯೊಳಗೆ ಹಾಗೂ ಹೊರಗೆ ಹೇಗೆ ಸುತ್ತಾಡುತ್ತಾರೆ ಎಂಬ ಬಗ್ಗೆ ತೋರಿಸುತ್ತದೆ. ಮೆಟ್ಟಿಲುಗಳನ್ನು ಹತ್ತಲು ಮತ್ತು ಕೆಳಗಿಳಿಯಲು ತನ್ನ ಬೆತ್ತವನ್ನು ಹೇಗೆ ಬಳಸುತ್ತಾರೆ  ಎಂಬುದನ್ನು ವಿಡಿಯೋ ತೋರಿಸುತ್ತದೆ.

ತೂಕ ಕಡಿಮೆ ಮಾಡುತ್ತೆ ಈ ಧಾನ್ಯ

ಆದರೆ, ಅವರ ಚಟುವಟಿಕೆಗಳು ಕೇವಲ ಮೂಲಭೂತ ವಿಷಯಗಳಿಗೆ ಸೀಮಿತವಾಗಿದೆಯೇ? ಖಂಡಿತ ಇಲ್ಲ. ಆಂಟನಿ ಅತ್ಯಾಸಕ್ತ ಸ್ಕೇಟ್‌ಬೋರ್ಡರ್, ಪ್ರೇರಕ ಸ್ಪೀಕರ್ ಮತ್ತು ಗಿಟಾರ್ ವಾದಕ. ಅವರು ತನ್ನ ನಾಯಿಯನ್ನು ನ್ಯೂಯಾರ್ಕ್‌ನ ಮುಖ್ಯ ರಸ್ತೆಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ವಾಕಿಂಗ್ ಗಾಗಿ ಕರೆದೊಯ್ಯುತ್ತಾರೆ. ಕ್ರೀಡಾಪಟು ತನ್ನ ಪತ್ನಿ ಕೆಲ್ಲಿಯ ಸಹಾಯದಿಂದ ವಿಡಿಯೊಗಳನ್ನು ಮಾಡಿರುವುದಾಗಿ ಹೇಳಿದ್ದಾರೆ.

ಕೆಲವೇ ದಿನಗಳ ಹಿಂದೆ, ಅವರು ತಮ್ಮ ಮದುವೆಯ ಸಂತೋಷಕರ ವಿಡಿಯೋವನ್ನು ಹಂಚಿಕೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...