alex Certify ಒಂದೂವರೆ ವರ್ಷದ ನಂತ್ರ ಬಯಲಾಯ್ತು ಕೊಲೆ ರಹಸ್ಯ: ಪ್ರಿಯತಮೆ ಕೊಂದು ಬ್ಯಾಗ್ ನಲ್ಲಿ ಶವ ಹಾಕಿ ಡ್ರಮ್ ನಲ್ಲಿ ಬಚ್ಚಿಟ್ಟಿದ್ದ ಪಾಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೂವರೆ ವರ್ಷದ ನಂತ್ರ ಬಯಲಾಯ್ತು ಕೊಲೆ ರಹಸ್ಯ: ಪ್ರಿಯತಮೆ ಕೊಂದು ಬ್ಯಾಗ್ ನಲ್ಲಿ ಶವ ಹಾಕಿ ಡ್ರಮ್ ನಲ್ಲಿ ಬಚ್ಚಿಟ್ಟಿದ್ದ ಪಾಪಿ

ವಿಶಾಖಪಟ್ಟಣಂ: ಪ್ರೇಮಿಯನ್ನು ಕೊಲೆಗೈದ ವ್ಯಕ್ತಿ ಶವವನ್ನು ಜಿಪ್ ಬ್ಯಾಗ್‌ ನಲ್ಲಿ ಪ್ಯಾಕ್ ಮಾಡಿ ಡ್ರಮ್‌ ನೊಳಗೆ ಬಚ್ಚಿಟ್ಟಿದ್ದಾನೆ. 1.5 ವರ್ಷಗಳ ನಂತರ ಮನೆ ಮಾಲೀಕರಿಗೆ ಇದು ಗೊತ್ತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯನ್ನು ಹತ್ಯೆಗೈದ ಆರೋಪಿಯನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಆರೋಪಿ ರಿಷಿ ಬಹಳ ಸಮಯದಿಂದ ಪರಾರಿಯಾಗಿದ್ದ. ಅಂತಿಮವಾಗಿ ತನಿಖಾಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.

ಕೊಲೆಯ ಕೆಲವು ರೋಚಕ ವಿವರಗಳನ್ನು ಬಹಿರಂಗಪಡಿಸಿದ ವಿಶಾಖಪಟ್ಟಣಂ ನಗರ ಪೊಲೀಸ್ ಕಮಿಷನರ್ ಶ್ರೀಕಾಂತ್, ರಿಷಿ ಮಹಿಳೆಯ ಕತ್ತು ಹಿಸುಕಿ ಸಾಯಿಸಿದ್ದಾನೆ. ಆಕೆಯ ದೇಹವನ್ನು ಜಿಪ್ ಬ್ಯಾಗ್‌ ನಲ್ಲಿ ಪ್ಯಾಕ್ ಮಾಡಿದ್ದಾನೆ. ನಂತರ ಬ್ಯಾಗ್ ಅನ್ನು ನಗರದಲ್ಲಿನ ಅವರ ಬಾಡಿಗೆ ವಸತಿಗೃಹದಲ್ಲಿ ಡ್ರಮ್‌ ನಲ್ಲಿ ಮರೆಮಾಡಲಾಗಿತ್ತು ಎಂದು ತಿಳಿಸಿದ್ದಾರೆ.

ಸಂತ್ರಸ್ತೆಯನ್ನು ಧನಲಕ್ಷ್ಮಿ ಎಂದು ಗುರುತಿಸಲಾಗಿದ್ದು, ಹಣದ ವಿವಾದದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ. 2000 ರೂಪಾಯಿಗೆ ಬೇಡಿಕೆ ಇಟ್ಟಿದ್ದ ಮಹಿಳೆಯನ್ನು ರಿಷಿ ಕೊಲೆ ಮಾಡಿದ್ದಾನೆ. ಕೊಲೆಯಾದ ಒಂದೂವರೆ ವರ್ಷಗಳ ನಂತರ ಧನಲಕ್ಷ್ಮಿ ಶವವನ್ನು ರಿಷಿಯ ಮನೆ ಮಾಲೀಕರು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆಕೆಯ ಪಾರ್ಥಿವ ಶರೀರವನ್ನು ಡಿಎನ್‌ಎ ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಲಾಗಿದೆ ಎಂದು ಆಯುಕ್ತ ಶ್ರೀಕಾಂತ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...