alex Certify ಅಯ್ಯಪ್ಪನ ಭಕ್ತರಿಗೆ ಶುಭ ಸುದ್ದಿ: ಶಬರಿಮಲೆ ದರ್ಶನಕ್ಕೆ ʼಆನ್​ಲೈನ್​ʼ ಬುಕ್ಕಿಂಗ್​ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಯ್ಯಪ್ಪನ ಭಕ್ತರಿಗೆ ಶುಭ ಸುದ್ದಿ: ಶಬರಿಮಲೆ ದರ್ಶನಕ್ಕೆ ʼಆನ್​ಲೈನ್​ʼ ಬುಕ್ಕಿಂಗ್​ ಆರಂಭ

ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಎದುರು ನೋಡುತ್ತಿದ್ದವರಿಗೆ ತಿರುವಂಕೂರು ದೇವಸ್ವ ಮಂಡಳಿ ಸಿಹಿ ಸುದ್ದಿಯನ್ನು ನೀಡಿದೆ. ಸೆಪ್ಟೆಂಬರ್​ 17ರಿಂದ ಆರಂಭವಾಗಲಿರುವ ಐದು ದಿನಗಳ ಪೂಜಾ ಕಾರ್ಯಗಳಿಗೆ ಭೇಟಿ ನೀಡ ಬಯಸುವ ಭಕ್ತರು ಇಂದಿನಿಂದ ಆನ್​ಲೈನ್​ ಬುಕ್ಕಿಂಗ್​ ಮಾಡಬಹುದಾಗಿದೆ.

ತಿರುವಂಕೂರು ದೇವಸ್ವ ಮಂಡಳಿಯು ದೇವಾಲಯದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತದೆ. ಈ ತಿಂಗಳು ಅಯ್ಯಪ್ಪನ ದರ್ಶನ ಪಡೆಯಲು ಇಚ್ಚಿಸುವ ಭಕ್ತರು ಆರ್​ಟಿಪಿಸಿಆರ್ ಪ್ರಮಾಣ ಪತ್ರವನ್ನು ಹೊಂದಿರಬೇಕು ಅಥವಾ 2 ಡೋಸ್​ ಲಸಿಕೆಯನ್ನು ಪಡೆಯುವುದು ಕಡ್ಡಾಯವಾಗಿರಲಿದೆ. ಆನ್​​ಲೈನ್​ ಟಿಕೆಟ್​ ಬುಕ್ಕಿಂಗ್​ ಮಾಡಲು ಇಚ್ಛಿಸುವವರು https://www.onlinetdb.com/tdbweb/dist/login ಗೆ ಲಾಗಿನ್​ ಆಗಬಹುದಾಗಿದೆ. ಕೊರೊನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ಒಂದು ದಿನಕ್ಕೆ 15 ಸಾವಿರ ಭಕ್ತರ ಪ್ರವೇಶಕ್ಕೆ ಮಾತ್ರ ಅವಕಾಶ ಒದಗಿಸಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಶಬರಿಮಲೆ ದೇಗುಲವು ಪಶ್ಚಿಮ ಘಟ್ಟದಲ್ಲಿದ್ದು ಸಮುದ್ರ ಮಟ್ಟದಿಂದ 914 ಅಡಿ ಎತ್ತರದಲ್ಲಿದೆ. ಇದು ಕೇರಳ ನಗರದಿಂದ 100 ಕಿಲೋಮೀಟರ್​ ದೂರದಲ್ಲಿರುವ ಪತನಂತಿಟ್ಟ ಜಿಲ್ಲೆಯ ಪಂಬಾದಿಂದ ಸುಮಾರು 4 ಕಿಮೀ ದೂರದಲ್ಲಿದೆ. ಪಂಬಾದಿಂದ ಕಾಲ್ನಡಿಗೆಯಲ್ಲಿ ದೇವಸ್ಥಾನಕ್ಕೆ ತೆರಳಲು ಮಾತ್ರ ಅವಕಾಶವಿದೆ. ಪ್ರೌಢಾವಸ್ಥೆಗೆ ಬಂದ ಮಹಿಳೆಯರು ದೇವಸ್ಥಾನಕ್ಕೆ ಎಂಟ್ರಿ ನೀಡುವುದನ್ನು ತಪ್ಪಿಸುವ ಹಳೆಯ ಸಂಪ್ರದಾಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಸುದೀರ್ಘ ಕಾನೂನು ಹೋರಾಟವನ್ನು ನಡೆಸಿದೆ.

ಉಳಿದ ದೇಗುಲಗಳಂತೆ ಶಬರಿಮಲೆ ದೇವಸ್ಥಾನವು ಪ್ರತಿ ದಿನ ಭಕ್ತರ ದರ್ಶನಕ್ಕೆ ಅವಕಾಶ ನೀಡುವುದಿಲ್ಲ. ಇದು ತಿಂಗಳಲ್ಲಿ ಐದು ದಿನ ಮಾತ್ರ ತೆರೆದಿರುತ್ತದೆ. ವಾರ್ಷಿಕ ತೀರ್ಥಯಾತ್ರೆಯ ಅವಧಿಯು ನವೆಂಬರ್​ ಮೂರನೇ ವಾರದಲ್ಲಿ ಆರಂಭವಾಗುತ್ತದೆ ಹಾಗೂ ಜನವರಿ 2ನೇ ವಾರದಲ್ಲಿ ಕೊನೆಯಾಗುತ್ತದೆ.

2018ರಲ್ಲಿ ಸುಪ್ರೀಂ ಕೋರ್ಟ್​ ಎಲ್ಲಾ ವಯಸ್ಸಿನ ಮಹಿಳೆಯರು ದೇಗುಲಕ್ಕೆ ದರ್ಶನ ನೀಡಬಹುದು ಎಂದು ಆದೇಶ ನೀಡಿತ್ತು. ಇದಕ್ಕೂ ಮೊದಲು 10 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 50 ವರ್ಷದೊಳಗಿನ ಮಹಿಳೆಯರಿಗೆ ದೇಗುಲಕ್ಕೆ ಪ್ರವೇಶ ಇರಲಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...