alex Certify ಅಘ್ಘನ್ ಕ್ರಿಕೆಟಿಗ ನವೀನ್-ಉಲ್-ಹಕ್ ರನ್ನು ಅಪಹಾಸ್ಯ ಮಾಡದಂತೆ ಪ್ರೇಕ್ಷಕರಲ್ಲಿ ಕೊಹ್ಲಿ ಮನವಿ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಘ್ಘನ್ ಕ್ರಿಕೆಟಿಗ ನವೀನ್-ಉಲ್-ಹಕ್ ರನ್ನು ಅಪಹಾಸ್ಯ ಮಾಡದಂತೆ ಪ್ರೇಕ್ಷಕರಲ್ಲಿ ಕೊಹ್ಲಿ ಮನವಿ: ವಿಡಿಯೋ ವೈರಲ್

ನವದೆಹಲಿ: ಭಾರತ-ಅಫ್ಘಾನಿಸ್ತಾನ ನಡುವೆ ಬುಧವಾರ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದೆ. ಆದರೀಗ, ಪಂದ್ಯದ ವೇಳೆ ನಡೆದ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ.

ಹೌದು, ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ ಮ್ಯಾನ್ ವಿರಾಟ್ ಕೊಹ್ಲಿ, ನವೀನ್-ಉಲ್-ಹಕ್ ಅವರನ್ನು ಅಪಹಾಸ್ಯ ಮಾಡುವುದನ್ನು ನಿಲ್ಲಿಸುವಂತೆ ಪ್ರೇಕ್ಷಕರಿಗೆ ವಿನಂತಿಸಿದ್ದಾರೆ. ಭಾರತ ಮತ್ತು ಅಫ್ಘಾನಿಸ್ತಾನ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಪಂದ್ಯದ ವೇಳೆ, ಪ್ರೇಕ್ಷಕರು ಕೊಹ್ಲಿ, ಕೊಹ್ಲಿ ಎಂದು ಕೂಗುತ್ತಾ, ಅಪ್ಘನ್ ಆಟಗಾರ ಮೂಲಕ ನವೀನ್ ಉಲ್ ಹಕ್ ರನ್ನು ಅಣಕಿಸುತ್ತಿರುವುದು ಕಂಡುಬಂದಿದೆ.

ಈ ವೇಳೆ ಮಧ್ಯಪ್ರವೇಶಿಸಿದ ವಿರಾಟ್ ಕೊಹ್ಲಿ ನಿಜವಾದ ಕ್ರೀಡಾ ಮನೋಭಾವವನ್ನು ವ್ಯಕ್ತಪಡಿಸಿದ್ದಾರೆ. ನವೀನ್ ಉಲ್ ಹಕ್ ರನ್ನು ಅಣಕಿಸದಂತೆ ಕೊಹ್ಲಿ ಪ್ರೇಕ್ಷಕರಲ್ಲಿ ಮನವಿ ಮಾಡಿದ್ರು. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ಕೊಹ್ಲಿಯ ಕ್ರೀಡಾ ಮನೋಭಾವಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಇನ್ನು, ಪಂದ್ಯದಲ್ಲಿ ಇಬ್ಬರು ಆಟಗಾರರು ಹಸ್ತಲಾಘವ ಮಾಡಿ, ತಬ್ಬಿಕೊಂಡಿದ್ದು ಸಹ ಕಂಡುಬಂತು. ಪಂದ್ಯದ ನಂತರ ಸಹ ಇಬ್ಬರೂ ಆಟಗಾರರು ಸ್ನೇಹದಿಂದ ವರ್ತಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...