alex Certify ವಿರಾಟ್‌ ಕೊಹ್ಲಿ ಮುಂದೆ ಪಾಕ್‌ ಅಭಿಮಾನಿ ಇಟ್ಟಿದ್ದಾರೆ ಈ ಬೇಡಿಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿರಾಟ್‌ ಕೊಹ್ಲಿ ಮುಂದೆ ಪಾಕ್‌ ಅಭಿಮಾನಿ ಇಟ್ಟಿದ್ದಾರೆ ಈ ಬೇಡಿಕೆ…!

ವಿರಾಟ್ ಕೊಹ್ಲಿಗೆ ದೇಶ ಅಷ್ಟೆ ಅಲ್ಲ ವಿದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಅವರ ಪ್ರತಿ ರನ್ ಗೂ ಕುಣಿದು ಕುಪ್ಪಳಿಸುತ್ತಾರೆ ಅಭಿಮಾನಿಗಳು. ಇದೀಗ ಅವರ ಪಾಕಿಸ್ತಾನಿ ಅಭಿಮಾನಿಯೊಬ್ಬರ ಪೋಸ್ಟ್ ವೈರಲ್ ಆಗಿದೆ. ವಿರಾಟ್ ಕೊಹ್ಲಿಗೆ ಅವರು ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.

ಹೌದು, ವಿರಾಟ್ ಕೊಹ್ಲಿ ಬಹುತೇಕ ಎಲ್ಲಾ ದೇಶಗಳಲ್ಲೂ ಕ್ರಿಕೆಟ್ ಆಡಿದ್ದಾರೆ. ಭಾರತದ ಪರವಾಗಿ 102 ಟೆಸ್ಟ್, 262 ಏಕದಿನ ಪಂದ್ಯಗಳು ಮತ್ತು 108 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಎಲ್ಲಾ ಪಂದ್ಯಗಳು ದೇಶ, ವಿದೇಶಗಳಲ್ಲಿ ನಡೆದಿದೆ. ಆದರೆ ಪಾಕಿಸ್ತಾನದಲ್ಲಿ ಮಾತ್ರ ಯಾವುದೇ ಪಂದ್ಯ ಆಡಿಲ್ಲ.

ಹೀಗಾಗಿ ಪಾಕಿಸ್ತಾನಿ ಅಭಿಮಾನಿಯೊಬ್ಬ ನೀವು ನಿವೃತ್ತಿ ಆಗೋದ್ರೊಳಗೆ ನಮ್ಮ ದೇಶದಲ್ಲಿ ಆಟವಾಡಿ ಎಂದು ಹೇಳಿದ್ದಾರೆ. ಲಾಹೋರ್‌ ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಮತ್ತು ಇಂಗ್ಲೆಂಡ್ ಟಿ20 ಪಂದ್ಯದ ವೇಳೆ ಸ್ಥಳೀಯ ಅಭಿಮಾನಿಯೊಬ್ಬ ಪೋಸ್ಟರ್‌ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...