alex Certify ವಿರಾಟ್​ ಕೊಹ್ಲಿ ಭೇಟಿಯಾದ ಕ್ಷಣವನ್ನು ವಿಡಿಯೋ ಮೂಲಕ ಹಂಚಿಕೊಂಡ ಅಭಿಮಾನಿ; ಲಕ್ಷಾಂತರ ಮಂದಿಯಿಂದ ವೀಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿರಾಟ್​ ಕೊಹ್ಲಿ ಭೇಟಿಯಾದ ಕ್ಷಣವನ್ನು ವಿಡಿಯೋ ಮೂಲಕ ಹಂಚಿಕೊಂಡ ಅಭಿಮಾನಿ; ಲಕ್ಷಾಂತರ ಮಂದಿಯಿಂದ ವೀಕ್ಷಣೆ

ನೈನಿತಾಲ್​: ಸೆಲೆಬ್ರಿಟಿಗಳನ್ನು ಭೇಟಿಯಾಗುವ ಕನಸು ತಮ್ಮ ಜೀವನದ ಗುರಿಯಾಗಿಸಿಕೊಳ್ಳುತ್ತಿದ್ದಾರೆ ಹಲವು ಅಭಿಮಾನಿಗಳು. ಅವರನ್ನು ಭೇಟಿಯಾಗಲು ಎಂಥದ್ದೇ ಸಾಹಸಕ್ಕೂ ಸಿದ್ಧರಾಗುತ್ತಾರೆ. ಅಂಥದ್ದೇ ಒಂದು ಘಟನೆಯನ್ನು ಕ್ರಿಕೆಟಿಗ ವಿರಾಟ್​ ಕೊಹ್ಲಿ ಅವರ ಅಭಿಮಾನಿ ಹೇಳಿಕೊಂಡಿದ್ದಾರೆ.

ನೈನಿತಾಲ್‌ನ ಕೈಂಚಿ ಧಾಮ್ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವಿರಾಟ್ ಕೊಹ್ಲಿ ಮತ್ತು ಅವರ ಕುಟುಂಬವನ್ನು ತಾವು ಹೇಗೆ ಭೇಟಿಯಾದೆವು ಎಂದು ಅವರ ಅಭಿಮಾನಿ ಕಪಿಲ್ ಬರೆದುಕೊಂಡಿದ್ದಾರೆ. ಕೊಹ್ಲಿ ಜತೆಗಿನ ಭೇಟಿಯನ್ನು ರೆಕಾರ್ಡ್ ಮಾಡಿ ಅದನ್ನು ತಮ್ಮ ಇನ್​ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ.

ನೈನಿತಾಲ್ ಬಳಿಯ ಅಲ್ಮೋರಾ ರಸ್ತೆಯಲ್ಲಿರುವ ಪ್ರಸಿದ್ಧ ಖೈಂಚಿ ಧಾಮ್ ದೇವಸ್ಥಾನಕ್ಕೆ ಕೊಹ್ಲಿ ಭೇಟಿ ನೀಡುತ್ತಿದ್ದಾರೆ ಎಂದು ತಿಳಿದ ನಂತರ ಕಪಿಲ್ ಮತ್ತು ಅವರ ಸ್ನೇಹಿತರು ಕ್ರಿಕೆಟಿಗನನ್ನು ಭೇಟಿ ಮಾಡಲು ಬೆಳಿಗ್ಗೆ 6 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಹೊರಟಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು.

“ನಾವು ಬಂದಾಗ, ಏನನ್ನು ನಿರೀಕ್ಷಿಸಬೇಕೆಂದು ನಮಗೆ ತಿಳಿದಿರಲಿಲ್ಲ; ವಿರಾಟ್ ಭೇಟಿಯ ಬಗ್ಗೆ ನಾವು ಸ್ಥಳೀಯರನ್ನು ಕೇಳಿದೆವು ಮತ್ತು ಎಲ್ಲರೂ ನಮಗೆ ವಿಭಿನ್ನ ಕಥೆಗಳನ್ನು ಹೇಳಿದರು. ಅವರು ದೇವಾಲಯದೊಳಗೆ ಇದ್ದಾರೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಅವರು ಬೆಳಗ್ಗೆ 5 ಗಂಟೆಗೆ ಬರುತ್ತಾರೆ ಎಂದು ಹೇಳಿದರು. ಏನೇ ಆದರೂ ಅವರನ್ನು ಭೇಟಿಯಾಗಿಯೇ ಹೋಗಬೇಕೆಂದು ನಾವು ನಿರ್ಧರಿಸಿ, 10 ಗಂಟೆಯವರೆಗೆ ಕಾದೆವು. ಸುದೀರ್ಘ ಕಾಯುವಿಕೆ ನಂತರ ಅಂತಿಮವಾಗಿ ಕೊಹ್ಲಿಯನ್ನು ಭೇಟಿ ಮಾಡಲು ಮತ್ತು ಸೆಲ್ಫಿ ತೆಗೆದುಕೊಳ್ಳಲು ಸಾಧ್ಯವಾಯಿತು ಎಂದು ಕಪಿಲ್​ ಬರೆದುಕೊಂಡಿದ್ದಾರೆ.

ಕಪಿಲ್ ಅಪ್‌ಲೋಡ್ ಮಾಡಿದ ವೈರಲ್ ವೀಡಿಯೊ 3.3 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು 4.6 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿವೆ. ಕೊಹ್ಲಿ ಅವರನ್ನು ಭೇಟಿ ಮಾಡಿದ ನೀವೇ ಪುಣ್ಯವಂತರು ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...