alex Certify ಸೂರ್ಯಕುಮಾರ್​ ವಿಶ್ವದ ಅತ್ಯುತ್ತಮ ಆಟಗಾರ ಎಂದ ಕೊಹ್ಲಿ: ಷಟ್​ ಅಪ್​ ಎಂದ ಅಭಿಮಾನಿ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೂರ್ಯಕುಮಾರ್​ ವಿಶ್ವದ ಅತ್ಯುತ್ತಮ ಆಟಗಾರ ಎಂದ ಕೊಹ್ಲಿ: ಷಟ್​ ಅಪ್​ ಎಂದ ಅಭಿಮಾನಿ !

ಆಸ್ಟ್ರೇಲಿಯಾ ಆತಿಥ್ಯದಲ್ಲಿ ಇತ್ತೀಚೆಗೆ ಮುಕ್ತಾಯವಾಗಿದ್ದ 2022 ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಮೂರು ಅರ್ಧ ಶತಕಗಳೊಂದಿಗೆ ಹಲವು ಮಹತ್ತರ ಇನಿಂಗ್ಸ್‌ಗಳನ್ನು ಆಡಿದ್ದ ಸೂರ್ಯಕುಮಾರ್‌ ಯಾದವ್‌, ಇದೀಗ ನ್ಯೂಜಿಲೆಂಡ್‌ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿಯೂ ಅದೇ ಲಯವನ್ನು ಮುಂದುವರಿಸುವ ಮೂಲಕ ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರ ದೊಡ್ಡ ದಾಖಲೆಯೊಂದನ್ನು ಮುರಿದಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧ ಭಾನುವಾರ ನಡೆದಿದ್ದ ಎರಡನೇ ಟಿ20 ಪಂದ್ಯದಲ್ಲಿ ಶತಕ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಅವರು ಭಾಜನರಾದರು.

ತಮ್ಮ 360 ಡಿಗ್ರಿ ರೀತಿ ಮೈದಾನದ ಎಲ್ಲಾ ಕಡೆ ಸೂರ್ಯಕುಮಾರ್‌ ಯಾದವ್‌ ಚೆಂಡನ್ನು ಅಟ್ಟಿದ್ದರು. ಎದುರಿಸಿದ ಕೇವಲ 51 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್‌ ಹಾಗೂ 11 ಬೌಂಡರಿಗಳೊಂದಿಗೆ ಅಜೇಯ 111 ರನ್‌ ಸಿಡಿಸಿದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಎರಡನೇ ಶತಕ ಸಿಡಿಸಿದರು. ಸೂರ್ಯಕುಮಾರ್‌ ಶತಕದ ಬಲದಿಂದ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 191 ರನ್‌ ಕಲೆ ಹಾಕಿತ್ತು. ಬಳಿಕ 192 ರನ್‌ ಗುರಿ ಹಿಂಬಾಲಿಸಿದ ನ್ಯೂಜಿಲೆಂಡ್‌ ತಂಡ 126 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಸೂರ್ಯಕುಮಾರ್​ ಅವರು ತಮ್ಮ ದಾಖಲೆಯನ್ನು ಮುರಿದಿದುದಕ್ಕಾಗಿ ವಿರಾಟ್​ ಕೊಹ್ಲಿ ಅವರನ್ನು ಅಭಿನಂದಿಸಿದ್ದಾರೆ. ಇವರು ವಿಶ್ವದ ಅತ್ಯುತ್ತಮ ಆಟಗಾರ ಎಂದು ಕೊಹ್ಲಿ ಟ್ವಿಟರ್​ನಲ್ಲಿ ಬರೆದುಕೊಂಡಿದ್ದರು. ಇದು ಅವರ ಅಭಿಮಾನಿಗಳಿಗೆ ಸಹಿಸಲು ಆಗುತ್ತಿಲ್ಲ. ಕೊಹ್ಲಿಯ ಈ ಟ್ವೀಟ್​ಗೆ ರಿಪ್ಲೈ ಮಾಡಿರುವ ಅಭಿಮಾನಿಗಳು, ಸಾಕು ಸುಮ್ಮನಿರಿ (ಶಟ್​ ಅಪ್​), ನೀವೇ ವಿಶ್ವದ ಬೆಸ್ಟ್​ ಆಟಗಾರ ಎಂದಿದ್ದು, ಇದನ್ನೇ ಹಲವರು ಹೌದು, ಹೌದು ಎನ್ನುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...