alex Certify ಶಾಕಿಂಗ್​: ಶಮಿ ಪರ ನಿಂತ ವಿರಾಟ್​ ಕೊಹ್ಲಿ ಪುತ್ರಿಗೆ ಕಿಡಿಗೇಡಿಗಳಿಂದ ಅತ್ಯಾಚಾರದ ಬೆದರಿಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಶಮಿ ಪರ ನಿಂತ ವಿರಾಟ್​ ಕೊಹ್ಲಿ ಪುತ್ರಿಗೆ ಕಿಡಿಗೇಡಿಗಳಿಂದ ಅತ್ಯಾಚಾರದ ಬೆದರಿಕೆ…!

ಐಸಿಸಿ ವರ್ಲ್ಡ್​ ಕಪ್​ ಟಿ 20 ಪಂದ್ಯಾವಳಿಯಲ್ಲಿ ಟೀಂ ಇಂಡಿಯಾದ ಪ್ರದರ್ಶನವು ಅಭಿಮಾನಿಗಳಿಗೆ ನಿರಾಶೆ ಮೂಡಿಸುತ್ತಿರೋದಂತೂ ನಿಜ. ಆದರೆ ಶಾಕಿಂಗ್​ ಎಂಬಂತೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ 9 ತಿಂಗಳ ಮಗುವಿಗೆ ಅತ್ಯಾಚಾರದ ಬೆದರಿಕೆಗಳನ್ನು ಹಾಕಲಾಗ್ತಿದೆ ಎಂದು ವರದಿಯಾಗಿದೆ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್​ ಮೈದಾನದಲ್ಲಿ ಅಕ್ಟೋಬರ್ 24ರಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನವು 10 ವಿಕೆಟ್​ಗಳ ಅಂತರದಲ್ಲಿ ಟೀಂ ಇಂಡಿಯಾವನ್ನು ಮಣಿಸಿತ್ತು. ಇದಾದ ಬಳಿಕ ಮಹಮದ್​ ಶಮಿ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ವಿರೋಧವನ್ನು ಎದುರಿಸಿದ್ದರು.

ಈ ಪಂದ್ಯ ಮುಗಿದು ವಾರಗಳೇ ಕಳೆದಿದೆ. ವಿರಾಟ್​ ಕೊಹ್ಲಿ ಶಮಿ ಪರವಾಗಿ ಮಾತುಗಳನ್ನಾಡಿದ್ದರು. ಆದರೆ ಇದಕ್ಕೆ ಕೆಲ ಕಿಡಿಗೇಡಿಗಳು ಕೊಹ್ಲಿ ಊಹಿಸದ ಮಟ್ಟಿಗೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ವಿರಾಟ್​ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿಯ 9 ತಿಂಗಳಿಗೆ ಮಗುವಿಗೆ ಅತ್ಯಾಚಾರದ ಬೆದರಿಕೆಯನ್ನು ಹಾಕಲಾಗ್ತಿದೆ.

ಸೋಶಿಯಲ್​ ಮೀಡಿಯಾದಲ್ಲಿ ಹಾಕಲಾಗುತ್ತಿರುವ ಈ ರೀತಿಯ ಬೆದರಿಕೆಗಳ ವಿರುದ್ಧ ಟ್ವೀಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಅನ್ಯಧರ್ಮೀಯ ಆಟಗಾರನ ಪರ ನಿಂತಿದ್ದಕ್ಕೆ ಈ ರೀತಿ ಅಮಾನೀಯವಾಗಿ ಬೆದರಿಕೆಗಳನ್ನು ಒಡ್ಡುತ್ತಿರೋದು ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂತಹ ಸಂಗತಿಯಾಗಿದೆ ಎಂದು ಬೇಸರ ಹೊರಹಾಕುತ್ತಿದ್ದಾರೆ.

 

 

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...