alex Certify ನೋಡನೋಡುತ್ತಿದ್ದಂತೆಯೇ ಮೆಟ್ರೋ ಪ್ರಯಾಣಿಕನಿಂದ ಮೊಬೈಲ್‌ ಎಗರಿಸಿದ ಚಾಲಾಕಿ ಯುವತಿ…! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡನೋಡುತ್ತಿದ್ದಂತೆಯೇ ಮೆಟ್ರೋ ಪ್ರಯಾಣಿಕನಿಂದ ಮೊಬೈಲ್‌ ಎಗರಿಸಿದ ಚಾಲಾಕಿ ಯುವತಿ…! ವಿಡಿಯೋ ವೈರಲ್

ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಕಳ್ಳಿಯೊಬ್ಬಳು ಪ್ರಯಾಣಿಕರ ಮೊಬೈಲ್​ ಎಗರಿಸುವ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮೆಟ್ರೋದ ಡೋರ್​ನಲ್ಲಿ ವ್ಯಕ್ತಿಯೊಬ್ಬ ಮೊಬೈಲ್​ನಲ್ಲಿ ನೋಡುತ್ತಾ ನಿಂತಿದ್ದು, ಆತನ ಎದುರು ಮೆಟ್ರೋ ಹತ್ತುವಂತೆ ಯುವತಿಯೊಬ್ಬರು ನಿಂತಿರುವುದು ವಿಡಿಯೋದ ಆರಂಭದಲ್ಲಿ ಕಾಣಿಸುತ್ತದೆ.

ಆ ವ್ಯಕ್ತಿ ತನ್ನ ಎದುರಿಗಿರುವವರು ಸಹ ಪ್ರಯಾಣಿಕರು ಇರಬಹುದೆಂದು ಸುಮ್ಮನಿದ್ದಾರೆ. ಆದರೆ, ಇನ್ನೇನು ಮೆಟ್ರೋ ಡೋರ್​ ಕ್ಲೋಸ್​ ಆಗುತ್ತಿದೆ ಎನ್ನುವಾಗ ಮಾಸ್ಕ್​ ಧರಿಸಿದ್ದ ಯುವತಿ ಕ್ಷಣ ಮಾತ್ರದಲ್ಲಿ ಎದುರಿದ್ದ ವ್ಯಕ್ತಿಯ ಮೊಬೈಲ್​ ಎಳೆದುಕೊಂಡು ಓಡಿಬಿಡುತ್ತಾಳೆ. ಮೊಬೈಲ್​ ಕಳೆದುಕೊಂಡ ವ್ಯಕ್ತಿಗೆ ಹೊರಗೆ ಬರಲೂ ಸಾಧ್ಯವಿಲ್ಲ.

“ಖತಮ್​ ಟಾಟಾ ಬೈ ಬೈ ಗಯಾ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ಕೆಲವರು ಇದು ಸ್ಕ್ರಿಪ್ಟ್​ ಎಂದು ಬರೆದರೆ ಮತ್ತೆ ಕೆಲವರು ಯುವತಿಯ ಚಾಕಚಕ್ಯತೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...