alex Certify ‘ಮನಿಕೇ ಮಗೆ ಹಿತೆ’ಗೆ ಬಿಹು ನೃತ್ಯ ಪ್ರದರ್ಶಿಸಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮನಿಕೇ ಮಗೆ ಹಿತೆ’ಗೆ ಬಿಹು ನೃತ್ಯ ಪ್ರದರ್ಶಿಸಿದ ಮಹಿಳೆ

ಶ್ರೀಲಂಕಾದ ಗಾಯಕ ಯೊಹಾನಿ ದಿಲೋಕಾ ಡಿ ಸಿಲ್ವಾ ಹಾಡಿದ ಮನಿಕೇ ಮಗೆ ಹಿತೆ ಎಂಬ ಭಾವಪೂರ್ಣ ಹಾಡು ಇಂದಿಗೂ ಅಂತರ್ಜಾಲದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಶ್ರೀಲಂಕಾ ಮಾತ್ರವಲ್ಲ ಭಾರತದಲ್ಲೂ ಅಲೆ ಸೃಷ್ಟಿಸಿದೆ.

ಹಲವಾರು ಸೆಲೆಬ್ರಿಟಿಗಳು ಮತ್ತು ನೆಟ್ಟಿಗರು ಹಾಡಿಗೆ ನೃತ್ಯ ಮಾಡುವ ಮುಖಾಂತರ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇದೀಗ, ವೈರಲ್ ಆಗಿರುವ ಹಾಡಿನಲ್ಲಿ ಮಹಿಳೆಯೊಬ್ಬರು ಬಿಹು ನೃತ್ಯ ಮಾಡುತ್ತಿರುವ ಇನ್ನೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜನರನ್ನು ಮುದಗೊಳಿಸಿದೆ.

ಕಂಟೆಂಟ್ ಕ್ರಿಯೇಟರ್ ಆಗಿರುವ ಪಖಿ ರಾಯ್ ಎಂಬಾಕೆ, ಹಾಡಿಗೆ ಸ್ಟೆಪ್ಸ್ ಹಾಕಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಆಕೆ, ಹಳದಿ ಸೀರೆ ಧರಿಸಿ ಬಿಹು ಪ್ರದರ್ಶನ ನೀಡುವುದನ್ನು ಕಾಣಬಹುದು. ಇದು ಅಸ್ಸಾಂ ರಾಜ್ಯದ ಸ್ಥಳೀಯ ಜಾನಪದ ನೃತ್ಯವಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಆಕೆಯ ನೃತ್ಯವನ್ನು ಇಷ್ಟಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...