alex Certify ಕಪ್ಪು ಬಣ್ಣದ ಪುಟ್ಟ ಬಾಲಕಿಯರನ್ನು ನಿರ್ಲಕ್ಷಿಸಿದ ಥೀಮ್​ ಪಾರ್ಕ್ ಗೊಂಬೆ ಪಾತ್ರಧಾರಿ…! ಮನ ಕಲಕುತ್ತೆ ಇದರ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಪ್ಪು ಬಣ್ಣದ ಪುಟ್ಟ ಬಾಲಕಿಯರನ್ನು ನಿರ್ಲಕ್ಷಿಸಿದ ಥೀಮ್​ ಪಾರ್ಕ್ ಗೊಂಬೆ ಪಾತ್ರಧಾರಿ…! ಮನ ಕಲಕುತ್ತೆ ಇದರ ವಿಡಿಯೋ

ಯುಎಸ್​ನ ಬಾಲ್ಟಿಮೋರ್​ ಮೂಲದ ಕುಟುಂಬವೊಂದು ಜನಾಂಗೀಯ ತಾರತಮ್ಯವಾಗಿದೆ ಎಂದು ಅಮ್ಯೂಸ್​ಮೆಂಟ್​ ಪಾರ್ಕ್​ ವಿರುದ್ಧ $25 ಮಿಲಿಯನ್​ ಮೊತ್ತಕ್ಕೆ ಬೇಡಿಕೆ ಇಟ್ಟು ಮೊಕದ್ದಮೆ ಹೂಡಿದೆ.

ಜನಪ್ರಿಯ ಸೆಸೇಮ್​ ಸ್ಟ್ರೀಟ್​ ಶೋನಿಂದ ಪ್ರೇರಿತವಾದ ಫಿಲಡೆಲ್ಫಿಯಾದ ಅಮ್ಯೂಸ್ಮೆಂಟ್​ ಪಾರ್ಕ್​ ಅಮೆರಿಕಾದಲ್ಲಿ ಪ್ರಸಿದ್ಧವಾಗಿದೆ. ವರದಿಗಳ ಪ್ರಕಾರ, ಜೋಡಿ ಬ್ರೌನ್​ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಅಮ್ಯೂಸ್​ಮೆಂಟ್​ ಪಾರ್ಕ್​ಗೆ ಭೇಟಿ ನೀಡಿತ್ತು.

ಸ್ವಾಗತ ಮಾಡುವ ಸಂದರ್ಭದಲ್ಲಿ ಅನೇಕ ವೇಷಭೂಷಣದ ಪಾತ್ರಗಳು ತನ್ನ ಐದು ವರ್ಷದ ಮಗಳು ಮತ್ತು ಸೊಸೆಗೆ ಹೈ-ಫೈವ್ ಮಾಡಲು ನಿರಾಕರಿಸಿದವು.

ಜೋಡಿ ಬ್ರೌನ್​ ಇನ್​ಸ್ಟಾಗ್ರಾಮ್​ಗೆ ಪೋಸ್ಟ್​ ಮಾಡಿದ ಒಂಬತ್ತು ಸೆಕೆಂಡ್​ಗಳ ವಿಡಿಯೋ, ರೋಸಿಟಾ ಎಂಬ ಪಾತ್ರವು ಬಿಳಿ ಜನರ ಮಗು ಮತ್ತು ಮಹಿಳೆಯನ್ನು ಹೈ-ಫೈವ್​ ಮಾಡುವುದನ್ನು ತೋರಿಸಿದೆ, ನಂತರ ತನ್ನ ಕುಟುಂಬದ ಮಕ್ಕಳಿಗೆ ಹೈ-ಫೈವ್, ಹಗ್​ ಮಾಡಲು ನಿರಾಕರಿಸಿ “ಇಲ್ಲ” ಎಂದು ಸನ್ನೆ ಮಾಡಿ ಮುಂದೆ ಸಾಗುತ್ತದೆ.

ಈ ಘಟನೆಯನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದ್ದು, ಅಂದಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೆೈರಲ್​ ಆಗಿದೆ. ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಅಮ್ಯೂಸ್​ಮೆಂಟ್​ ಪಾರ್ಕ್ ​ಅನ್ನು ಬಹಿಷ್ಕರಿಸುವಂತೆ ಕರೆ ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...