alex Certify ಕೆನಡಾದ ಟಿಮ್ ಹಾರ್ಟನ್ಸ್ ಈಗ ಪಂಜಾಬ್​ನಲ್ಲಿ; ಕಾಫಿ ಪ್ರಿಯರು ಫುಲ್​ ಖುಷ್​ – ಭಾಂಗ್ರಾದೊಂದಿಗೆ ಸ್ವಾಗತ​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆನಡಾದ ಟಿಮ್ ಹಾರ್ಟನ್ಸ್ ಈಗ ಪಂಜಾಬ್​ನಲ್ಲಿ; ಕಾಫಿ ಪ್ರಿಯರು ಫುಲ್​ ಖುಷ್​ – ಭಾಂಗ್ರಾದೊಂದಿಗೆ ಸ್ವಾಗತ​

ಇತ್ತೀಚಿನ ದಿನಗಳಲ್ಲಿ ಪಂಜಾಬ್‌ ಮಂದಿ ಕೆನಡಾಕ್ಕೆ ಸ್ಥಳಾಂತರಗೊಂಡಂತೆ ತೋರುತ್ತಿದ್ದರೆ, ಈ ಬಾರಿ ಕೆನಡಾ ಪಂಜಾಬ್‌ಗೆ ಬಂದಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಕೆನಡಾದ ಆಹಾರ ಪಾನೀಯಗಳಿಗೆ ಹೆಸರುವಾಸಿಯಾಗಿರುವ ಟಿಮ್ ಹಾರ್ಟನ್ಸ್ ಪಂಜಾಬ್​ಗೆ ಕಾಲಿಟ್ಟಿದ್ದು, ಜನರು ಫುಲ್​ ಖುಷಿಯಾಗಿದ್ದಾರೆ. ಜನರು ಇದನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ.

ಟಿಮ್ ಹಾರ್ಟನ್ಸ್ ಭಾರತದಲ್ಲಿ ಪ್ರಾರಂಭಿಸಲಾಗುತ್ತಿದೆ ಎಂಬ ಸುದ್ದಿಯೇ ಹಲವರಿಗೆ ರೋಮಾಂಚನವನ್ನುಂಟು ಮಾಡುತ್ತಿದೆ. ಇದಾಗಲೇ ದೆಹಲಿಯಲ್ಲಿ ಇದು ಎರಡು ಔಟ್‌ಲೆಟ್‌ಗಳನ್ನು ಶುರು ಮಾಡಿದೆ. ಗುರುಗ್ರಾಮದಲ್ಲಿ ಕಳೆದ ಆಗಸ್ಟ್​ ತಿಂಗಳಿನಲ್ಲಿ ಶುರುವಾದ ಒಂದು ಔಟ್​ಲೆಟ್​ನಲ್ಲಿ ಕಾಫಿ ಪ್ರಿಯರು ಉತ್ಸಾಹದಿಂದ ಪಾಲ್ಗೊಂಡು ಕಾಫಿ ಹೀರಲು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಇದೀಗ ಪಂಜಾಬ್​ನಲ್ಲಿಯೂ ಟಿಮ್ ಹಾರ್ಟನ್ಸ್ ತನ್ನ ಹವಾ ಸೃಷ್ಟಿ ಮಾಡಿದೆ.

ಪಂಜಾಬಿಗಳು ಕೆನಡಾದ ತ್ವರಿತ ಆಹಾರ ಸರಪಳಿಯನ್ನು ತಮ್ಮದೇ ಆದ ಶೈಲಿಯಲ್ಲಿ ಸ್ವಾಗತಿಸಿದ್ದಾರೆ. ಚಂಡೀಗಢದ ಇಂಡಸ್ಟ್ರಿಯಲ್ ಏರಿಯಾ ಫೇಸ್ I ನಲ್ಲಿರುವ ಎಲಾಂಟೆ ಮಾಲ್‌ನಲ್ಲಿರುವ ಟಿಮ್ ಹಾರ್ಟನ್ಸ್‌ನ ಉದ್ಯೋಗಿಗಳು ತಮ್ಮ ಸಮವಸ್ತ್ರವನ್ನು ಧರಿಸಿ ಇಲ್ಲಿಯ ಜನಪ್ರಿಯ ನೃತ್ಯ ಭಾಂಗ್ರಾ ಮೂಲಕ ಸ್ವಾಗತಿಸಿದ್ದಾರೆ. ಇದರ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...