alex Certify ನಿಮ್ಮ ಮೊಗದಲ್ಲಿ ನಗು ಅರಳಿಸುತ್ತೆ ಪುಟ್ಟ ಕಂದನ ಮುದ್ದಾದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮೊಗದಲ್ಲಿ ನಗು ಅರಳಿಸುತ್ತೆ ಪುಟ್ಟ ಕಂದನ ಮುದ್ದಾದ ವಿಡಿಯೋ

ಪಿಜ್ಜಾ ಎಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ. ವೃತ್ತಾಕಾರದ ಈ ಖಾದ್ಯದ ಮೇಲೆ ವಿಭಿನ್ನ ಟಾಪಿಂಗ್ ಹರಡಿ, ತ್ರಿಕೋನಾಕಾರದಲ್ಲಿ ಕತ್ತರಿಸಿ ತಿನ್ನುವವರಿಗಷ್ಟೇ ಗೊತ್ತು ಇದರ ಗಮ್ಮತ್ತು.

ಇಲ್ಲೊಂದು ಮಗು ಪಿಜ್ಜಾ ನೋಡಿ ಕೇಕೆಹಾಕಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಇದೀಗ ವೈರಲ್ ಆಗುತ್ತಿದ್ದು, ಇದು ಎಲ್ಲಿಯದು ಎಂದು ತಿಳಿದು ಬಂದಿಲ್ಲ.

BIG NEWS: ʼಆಧಾರ್ ಕಾರ್ಡ್ʼ ನಂತೆ ಇನ್ಮುಂದೆ ಸಿಗಲಿದೆ ವಿಶಿಷ್ಟ ಆರೋಗ್ಯ ಕಾರ್ಡ್

ಆದರೆ, Good News Movement ಎಂಬ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಮಗುವಿನ ಸಂಭ್ರಮ ನೋಡಿದರೆ ಸಾಕು, ನಿಮ್ಮ ಮುಖದಲ್ಲಿ ನಗು ಮಿಂಚುವುದು ಖಂಡಿತ. ನೀವು ಕೂಡ ಪಿಜ್ಜಾ ಪ್ರೇಮಿಯಾಗಿದ್ದಲ್ಲಿ, ಈ ಮಗುವಿನ ಖುಷಿ ಅರ್ಥವಾಗುವುದರಲ್ಲಿ ಸಂದೇಹವಿಲ್ಲ.

ಈ ವಿಡಿಯೋದಲ್ಲಿ ಪುಟ್ಟ ಮಗುವೊಂದು ಹಾಸಿಗೆ ಮೇಲೆ ಕೂತಿದ್ದು, ಅದರ ಪಕ್ಕ ಪಿಜ್ಜಾ ಬಾಕ್ಸ್ ಇಡಲಾಗಿದೆ. ಬಾಕ್ಸ್ ತೆಗೆಯುತ್ತಿದ್ದಂತೆ, ಪಿಜ್ಜಾ ನೋಡಿ ಮಗು ತನ್ನ ಕೈಗಳೆರೆಡು ಅಲುಗಾಡಿಸಿ ಸಂಭ್ರಮಪಟ್ಟಿದೆ.

ಈ ವಿಡಿಯೋ ನೋಡಿ, ಪಿಜ್ಜಾ ಮೇಲಿನ ಬೆಣ್ಣೆಯಂತೆ ನಿಮ್ಮ ಮನಸ್ಸು ಕರಗದಿದ್ದರೆ ನೋಡಿ ಮತ್ತೆ ?

— GoodNewsMovement (@GoodNewsMoveme3) September 10, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...