alex Certify ಈ ವಿಡಿಯೋ ನೋಡಿದ್ರೆ ಮೈ ಝಮ್ ಅನ್ನೋದು ಗ್ಯಾರಂಟಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಡಿಯೋ ನೋಡಿದ್ರೆ ಮೈ ಝಮ್ ಅನ್ನೋದು ಗ್ಯಾರಂಟಿ..!

ಸಾಹಸಮಯ ಗೇಮ್​ಗಳ ಸಾಕಷ್ಟು ವಿಡಿಯೋಗಳು ನಿಮಗೆ ಇಂಟರ್ನೆಟ್​ನಲ್ಲಿ ಕಾಣಸಿಗಬಹುದು. ವಿಡಿಯೋಗಳನ್ನ ಸಾಹಸಮಯ ದೃಶ್ಯಗಳನ್ನ ನೋಡುವಾಗಲೇ ಮೈ ಝುಂ ಎಂದಂತೆ ಭಾಸವಾಗುತ್ತೆ.

ಅಂತದ್ರಲ್ಲಿ ಸಾಹಸಗಳನ್ನ ಮಾಡೋವಾಗ ಇನ್ನೆಷ್ಟು ಭಯ ಆಗಬಹುದು ಅನ್ನೋದನ್ನ ಊಹೆ ಮಾಡಿಕೊಳ್ಳೋದು ಕೂಡ ಅಸಾಧ್ಯವಾದ ಕೆಲಸವೇ ಸರಿ.

ಟಿಕ್​ಟಾಕ್​ನಲ್ಲೂ ಇಂತಹದ್ದೇ ಒಂದು ರೋಮಾಂಚನಕಾರಿ ಸಾಹಸಮಯ ವಿಡಿಯೋವೊಂದು ವೈರಲ್​ ಆಗಿದೆ. ಚೀನಾದ ಪ್ರದೇಶವೊಂದರಲ್ಲಿ ತೆಗೆದ ವಿಡಿಯೋ ಇದಾಗಿದೆ.

ಈ ವಿಡಿಯೋದಲ್ಲಿ ಅತೀ ಎತ್ತರದ ಸ್ಥಳದಲ್ಲಿ ಬ್ರಿಡ್ಜ್​ ಮಾದರಿಯಲ್ಲಿ ಮೆಟಲ್​ ಬಾರ್​ಗಳನ್ನ ಹೆಜ್ಜೆ ಅಂತರದಲ್ಲಿ ಇಡಲಾಗಿದೆ. ಈ ಸೇತುವೆಯನ್ನ ದಾಟುವವರು ಕೆಳಕ್ಕೆ ಬೀಳದಂತೆ ಮಾಡಲು ಸೊಂಟಕ್ಕೆ ಬೆಲ್ಟ್​ನ್ನು ಕಟ್ಟಲಾಗಿದೆ. ಈ ವಿಡಿಯೋ ಟಿಕ್​ಟಾಕ್​ನಲ್ಲಿ 1 ಮಿಲಿಯನ್​ಗೂ ಅಧಿಕ ವೀವ್ಸ್ ಸಂಪಾದಿಸಿದೆ. ಇದೀಗ ಈ ವಿಡಿಯೋವನ್ನ ಯುಟ್ಯೂಬ್​ನಲ್ಲೂ ಶೇರ್​ ಮಾಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...