alex Certify 12 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ ವಧು – ವರನ ಈ ಡಾನ್ಸ್‌ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

12 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ ವಧು – ವರನ ಈ ಡಾನ್ಸ್‌ ವಿಡಿಯೋ

ಮದುವೆ ಸಮಾರಂಭಗಳಲ್ಲಿ ಒಂದಷ್ಟು ಮೋಜು ಮಸ್ತಿ, ಹಾಡು ಕುಣಿತ ಸಾಮಾನ್ಯ. ಇಲ್ಲೊಂದು ಮದುವೆಯಲ್ಲಿ ಭೋಜ್​ಪುರಿ ಹಾಡಿಗೆ ವಧು – ವರರಿಗೆ ಸ್ಟೆಪ್​ ಹಾಕ ಬಯಸಿದ ಅವರ ಕುಟುಂಬದವರು, ಸ್ನೇಹಿತರು ಸುತ್ತುವರಿದು ಮಜಾ ಪಡೆಯಲು ಪ್ರಯತ್ನಿಸಿದ್ದಾರೆ.

ವರನು ಡಿಜೆ ಫ್ಲೋರ್​ನಲ್ಲಿ ಹಾಡಿಗೆ ಯಾವುದೇ ಅಳುಕಿಲ್ಲದೇ ಡ್ಯಾನ್ಸ್​ ಆರಂಭಿಸಿದರೆ, ವಧುಗೆ ಎಲ್ಲರೆದುರು ಡ್ಯಾನ್ಸ್​ ಮಾಡಲು ನಾಚಿಕೆ ಪಡುವ ಸನ್ನಿವೇಶ ನೆಟ್ಟಿಗರ ಮನ ಗೆದ್ದಿದೆ. ಆಕೆಯ ನಾಚಿಕೆಯೇ ವಿಡಿಯೋ ಹೈಲೈಟ್​.

ಕೊನೆಗೆ ಕುಟುಂಬ ಮತ್ತು ಸ್ನೇಹಿತರು ಒತ್ತಾಯಿಸಿದಾಗ ಆಕೆ ಸಣ್ಣದಾಗಿ ಸ್ಟೆಪ್​ ಹಾಕುತ್ತಾಳೆ. ಆಕೆಯ ನಗು, ನಾಚಿಕೆಯನ್ನು ಅಲ್ಲಿದ್ದವರು ಆನಂದಿಸುತ್ತಾರೆ ನಂತರ ವರನು ಆಕೆಯನ್ನು ಪ್ರೋತ್ಸಾಹಿಸಿದಾಗ ಮುಕ್ತವಾಗಿ ನೃತ್ಯ ಮಾಡುತ್ತಾಳೆ. ವರನ ಕಿವಿಯಲ್ಲಿ ಏನನ್ನೋ ಪಿಸುಗುಟ್ಟುವುದೂ ಸಹ ಕಾಣಬಹುದು. ನಂತರ ಮುಕ್ತವಾಗಿ ವರ ಸೇರಿದಂತೆ ಎಲ್ಲರನ್ನೂ ಆವರಿಸುವ ರೀತಿಯಲ್ಲಿ ನೃತ್ಯ ಮಾಡಿದರು.

ಈ ಡ್ಯಾನ್ಸ್​ ವಿಡಿಯೋವನ್ನು ವಿಕೆ ವಿಲೇಜ್​ ವಿಡಿಯೋ ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ಅಪ್​ಲೋಡ್​ ಮಾಡಲಾಗಿದೆ. ಇದುವರೆಗೆ 12 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಆ ಮಟ್ಟಿಗೆ ಜನರ ಮನ ಗೆದ್ದಿದೆ. ಕಳೆದ ವರ್ಷ ವೈರಲ್​ ಆದ ನಂತರ ಈ ವಿಡಿಯೋ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ. ನೆಟ್ಟಿಗರು ತಮಾಷೆಯ ಕಾಮೆಂಟ್​ಗಳನ್ನು ಮಾಡಿ ಖುಷಿಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...