alex Certify ಬೆರಗುಗೊಳಿಸುತ್ತೆ ವಿಶೇಷ ಸಾಮರ್ಥ್ಯವುಳ್ಳ ಹುಡುಗನ ಮೋಡಿ ಮಾಡುವ ಪೇಂಟಿಂಗ್​ ಕೌಶಲ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗುಗೊಳಿಸುತ್ತೆ ವಿಶೇಷ ಸಾಮರ್ಥ್ಯವುಳ್ಳ ಹುಡುಗನ ಮೋಡಿ ಮಾಡುವ ಪೇಂಟಿಂಗ್​ ಕೌಶಲ್ಯ

ಜೀವನವು ಎಂದಿಗೂ ಸುಲಭವಲ್ಲ, ಹಾಗೆಂದು ಕಷ್ಟವೂ ಅಲ್ಲ. ಆಯಾವುದೇ ರೀತಿಯ ದೈಹಿಕ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಇದು ಸ್ವಲ್ಪ ಕಷ್ಟಕರವಾಗಿರುತ್ತದೆ. ಆದರೆ, ಸಂಕಲ್ಪ ಮತ್ತು ಇಚ್ಛಾಶಕ್ತಿಯಿಂದ, ದೈಹಿಕ ನ್ಯೂನ್ಯತೆಗಳನ್ನು ಜಯಿಸಬಹುದು.

ಐಪಿಎಸ್​ ಅಧಿಕಾರಿ ದೀಪಾಂಶು ಕಾಬ್ರಾ ಶೇರ್​ ಮಾಡಿರುವ ವಿಡಿಯೋ ಈ ಮಾತಿಗೆ ಪುಷ್ಟಿ ನೀಡುತ್ತದೆ.

ವಿಶೇಷ ಸಾಮರ್ಥ್ಯದ ಹುಡುಗನೊಬ್ಬ ಪೇಂಟಿಂಗ್​ ಮಾಡುತ್ತಿದ್ದು, ಆತನ ಮೊಣಕೈಯಲ್ಲಿ ಬ್ರಶ್​ ಬಳಸುವುದನ್ನು 9 ಸೆಕೆಂಡ್​ ಗಳ ವಿಡಿಯೋದಲ್ಲಿ ನೋಡಬಹುದು. ವಿಡಿಯೊವನ್ನು ಸೆಪ್ಟೆಂಬರ್​ 6 ರಂದು ಹಂಚಿಕೊಳ್ಳಲಾಗಿದೆ,

ಇದು 69,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಈ ಹುಡುಗನ ಸಂಕಲ್ಪದ ಬಗ್ಗೆ ಸಾಮಾಜಿಕ ತಾಲತಾಣ ಬಳಕೆದಾರರು ಪ್ರಭಾವಿತರಾಗಿದ್ದಾರೆ. ಕೆಲವರು ಅಂತಹುದೇ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಕೈ ಮತ್ತು ಕಾಲುಗಳಿಲ್ಲದ ವ್ಯಕ್ತಿಯ ಪ್ರತಿ ಕೆಲಸವನ್ನು ಸುಲಭವಾಗಿ ಮಾಡುವ ವಿಡಿಯೊವನ್ನು ಒಬ್ಬರು ಹಂಚಿಕೊಂಡಿದ್ದರೆ, ತನ್ನ ತುಟಿ ಮತ್ತು ಮೂಗಿನ ಸಹಾಯದಿಂದ ಟೈಪ್​ ಮಾಡುತ್ತಿದ್ದ ಇನ್ನೊಂದು ವಿಡಿಯೋವನ್ನು ಶೇರ್​ ಮಾಡಿದ್ದಾರೆ.

2020 ರಲ್ಲಿ ಕೈಗಳಿಲ್ಲದ ಆದರೆ ಕಾಲಿನಿಂದ ಚಿತ್ರಿಸುವ ಗೋಕರನ್​ ಪಾಟೀಲ್​ ಎಂಬ ಹುಡುಗನ ವಿಡಿಯೊವನ್ನು ಐಎಎಸ್​ ಅಧಿಕಾರಿ ಪ್ರಿಯಾಂಕಾ ಶುಕ್ಲಾ ಹಂಚಿಕೊಂಡಿದ್ದರು. ಗೋಕರನ್​ ಕೂಡ ಶ್ರವಣ ದೋಷದಿಂದ ಬಳಲುತ್ತಿದ್ದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...