alex Certify 18 ಚಕ್ರದ ಟ್ರಕ್​ ಪಾರ್ಕಿಂಗ್​ ವಿಧಾನದ ವಿಡಿಯೋ ವೈರಲ್​: ಚಾಲಕನ ಕೌಶಲಕ್ಕೆ ಬೆರಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

18 ಚಕ್ರದ ಟ್ರಕ್​ ಪಾರ್ಕಿಂಗ್​ ವಿಧಾನದ ವಿಡಿಯೋ ವೈರಲ್​: ಚಾಲಕನ ಕೌಶಲಕ್ಕೆ ಬೆರಗಾದ ನೆಟ್ಟಿಗರು

ವಾಹನವನ್ನು ನಿಲುಗಡೆ ಮಾಡುವಾಗ, ಸ್ವಲ್ಪ ಕುಶಲತೆ ಅಗತ್ಯವಿದೆ. ಆದ್ದರಿಂದ ವಾಹನ ಚಾಲಕರು ಪಾರ್ಕಿಂಗ್​ ಮಾಡುವಾಗ ಸದಾ ಎಚ್ಚರವಾಗಿರುತ್ತಾರೆ.

ಒಂದು ವೇಳೆ ವಾಹನವು 18 ಚಕ್ರದ ಟ್ರಕ್ ಆಗಿದ್ದರೆ ಪಾರ್ಕಿಂಗ್​ ಎಷ್ಟು ಕಷ್ಟ ಎಂದು ಊಹಿಸಿಕೊಳ್ಳುವುದೇ ಕಷ್ಟ. ಇದಕ್ಕೆ ಹೆಚ್ಚಿನ ಎಚ್ಚರಿಕೆ ಮತ್ತು ಕೌಶಲ ಬೇಕಾಗುತ್ತವೆ. ಸಾಮಾಜಿಕ ಮಾಧ್ಯಮದಲ್ಲಿ ಇಂಥ ಟ್ರಕ್ ಚಾಲಕನ ಅಸಾಧಾರಣ ಪಾರ್ಕಿಂಗ್ ಕೌಶಲ ಪ್ರದರ್ಶಿಸಲಾಗಿದೆ.

ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಚಾಲಕನ ಪಾರ್ಕಿಂಗ್​ ಕೌಶಲವನ್ನು ನೋಡಬಹುದಾಗಿದೆ. ಚಾಲಕನು ಕ್ಯಾಬಿನ್‌ನೊಳಗೆ ಹತ್ತದೆ ಮತ್ತು ವಾಹನದ ಪಕ್ಕದಲ್ಲಿ ನಡೆಯುವಾಗ ಸ್ಟೀರಿಂಗ್ ಅನ್ನು ನಿಯಂತ್ರಿಸದೆ ಬೃಹತ್ ಟ್ರಕ್ ಅನ್ನು ನಿಲ್ಲಿಸುವುದನ್ನು ವಿಡಿಯೋದಲ್ಲಿ ನೋಡಬಹುದು.

ಈ ಚಾಲಕನ ಚಾಲನಾ ಕೌಶಲ ಎಲ್ಲರನ್ನೂ ಬೆರಗುಗೊಳಿಸುತ್ತಿದೆ. ಈ ಕೌಶಲಕ್ಕೆ ಇದಾಗಲೇ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿದೆ,

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...