alex Certify ತೆಂಗಿನ ಮರವನ್ನು ಹತ್ತಿ ಇಳಿಯುವ ಚಿರತೆ ದೃಶ್ಯ ವೈರಲ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೆಂಗಿನ ಮರವನ್ನು ಹತ್ತಿ ಇಳಿಯುವ ಚಿರತೆ ದೃಶ್ಯ ವೈರಲ್​….!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋವೊಂದರಲ್ಲಿ ಚಿರತೆ ತೆಂಗಿನ ಮರವನ್ನು ಹತ್ತಿ ಇಳಿಯುತ್ತಿರುವುದನ್ನು ಕಾಣಬಹುದು.

ಈ ವಿಡಿಯೋ ನೆಟ್ಟಿಗರನ್ನು ಅಚ್ಚರಿಗೆ ತಳ್ಳಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್​ ಕಸ್ವಾನ್​ ಟ್ವಿಟರ್​ನಲ್ಲಿ ಇದನ್ನು ಪೋಸ್ಟ್​ ಮಾಡಿದ್ದು ಸಾವಿರಾರು ವೀಕ್ಷಣೆ ಕಂಡಿದೆ.

ಈ ಚಿರತೆಯ ಚುರುಕುತನ ನೋಡಿ. ಚಿರತೆಗಳು ಭಾರತದಲ್ಲಿ ಸರ್ವವ್ಯಾಪಿಯಾಗಿವೆ ಎಂದು ವಿಡಿಯೋ ಹಂಚಿಕೊಂಡಿದ್ದಾರೆ. ನಂತರದ ಟ್ವೀಟ್​ನಲ್ಲಿ, ಚಿರತೆಗಳು ಯಾವುದೇ ಸ್ಥಳಕ್ಕೆ ಹೇಗೆ ಹೊಂದಿಕೊಳ್ಳುತ್ತವೆ ಎಂದು ಅವರು ವಿವರಿಸಿದ್ದಾರೆ.

ಚಿರತೆಗಳು ಚುರುಕಾಗಿರುತ್ತವೆ ಮತ್ತು ಎಲ್ಲಾ ರೀತಿಯ ಸ್ಥಳಗಳಿಗೆ ಹೊಂದಿಕೊಳ್ಳುತ್ತವೆ. ರಾಜಸ್ಥಾನದ ರಾಕಿ ಮತ್ತು ಒಣ ಬೆಟ್ಟಗಳಿಂದ ಈಶಾನ್ಯದ ಎತ್ತರದ ಅರಣ್ಯದವರೆಗೆ. ಬಾಂಬೆ ಮತ್ತು ಗುರ್​ಗಾಂವ್​ನಂತಹ ನಗರಗಳಿಂದ ಹಿಮಾಲಯದಲ್ಲಿಯೂ ಇರುತ್ತವೆ.

ಅವು ಟೀ ಪ್ಲಾಂಟೇಶನ್​, ತೋಟಗಳು ಮತ್ತು ಕಬ್ಬಿನ ತೋಟಗಳಲ್ಲಿ ಹೆಚ್ಚು ಇರುತ್ತವೆ. ಟೀ ಪ್ಲಾಂಟೇಷನ್​ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...