alex Certify ವೇದಿಕೆ ಮೇಲೆ ವರನಿಗೆ ಆರತಿ ಮಾಡ್ತಿರೋ ವಧು: ಕೆಳಗಡೆ ಭಯಾನಕ ಜಗಳ – ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇದಿಕೆ ಮೇಲೆ ವರನಿಗೆ ಆರತಿ ಮಾಡ್ತಿರೋ ವಧು: ಕೆಳಗಡೆ ಭಯಾನಕ ಜಗಳ – ವಿಡಿಯೋ ವೈರಲ್

ವಧು ಮತ್ತು ವರರು ವೇದಿಕೆಯ ಮೇಲೆ ನಿಂತು ವಿಧಿವಿಧಾನಗಳನ್ನು ಪೂರೈಸುತ್ತಿರುವ ಸಮಯದಲ್ಲಿ ಕೆಳಗಡೆ ಭಾರಿ ಗಲಾಟೆ, ಹೊಡೆದಾಟ ಆಗುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಮದುಮಗಳು ಮದುಮಗನಿಗೆ ಆರತಿ ಮಾಡುತ್ತಿದ್ದಾಗ ಕೆಳಗೆ ಜಗಳ ಆಗುತ್ತಿದ್ದು, ವಧು-ವರ ಶಾಕ್​ ಆಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಈ ವಿಡಿಯೋ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಕೆಳಗೆ ಗಲಾಟೆಯಾಗುತ್ತಿದ್ದರೂ ವಧು, ವರನಿಗೆ ಮೊದಲು ಆರತಿ ಪೂರ್ಣಗೊಳಿಸುತ್ತಾಳೆ. ನಂತರ ಇಬ್ಬರೂ ಸೇರಿ ಗಾಬರಿಯಿಂದ ಜಗಳವನ್ನು ನೋಡುತ್ತಾರೆ. ಇಡೀ ಘಟನೆಯನ್ನು ಚಿತ್ರೀಕರಿಸಲು ಡ್ರೋನ್​ ಕೂಡ ಹಾರಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಅಗಿದೆ.

ಗಲಾಟೆಗೆ ಕಾರಣಗಳೇನು ಎನ್ನುವುದು ತಿಳಿದಿಲ್ಲ. ಆದರೆ ಈ ವಿಡಿಯೋ ನೋಡುತ್ತಿದ್ದಂತೆಯೇ ಜನರು ತಮ್ಮದೇ ಆದ ರೀತಿಯಲ್ಲಿ ಥರಹೇವಾರಿ ಕಮೆಂಟ್​ ಮಾಡುತ್ತಿದ್ದಾರೆ. ಬಹುಶಃ ಕೊಟ್ಟ ವರದಕ್ಷಿಣೆ ಸಾಕಾಗಿರಲಿಕ್ಕಿಲ್ಲ ಎಂದು ಕೆಲವರು ವಾದಿಸುತ್ತಿದ್ದರೆ, ಮದುವೆಯ ಊಟ ಚೆನ್ನಾಗಿಲ್ಲ ಎಂದು ಗಲಾಟೆ ಶುರುವಾಗಿರಬಹುದು ಎಂದು ಇನ್ನು ಕೆಲವರು ಊಹಿಸಿದ್ದಾರೆ. ವಧುವೋ, ವರನೋ ತಮಗೆ ಸೇರಬೇಕಾದವರು ಎಂದು ಗಲಾಟೆ ಶುರುವಾಗಿರಬಹುದು ಎಂದು ಕೆಲವರು ತಮಾಷೆಯ ಕಮೆಂಟ್​ ಕೂಡ ಹಾಕಿದ್ದಾರೆ. ಒಟ್ಟಿನಲ್ಲಿ ಜನರಿಗೆ ಈ ಗಲಾಟೆ ಮನರಂಜನೆ ಒದಗಿಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...