alex Certify ದೇವಾಲಯದಲ್ಲಿ ಅತ್ಯಂತ ಶ್ರದ್ಧೆಯಿಂದ ಘಂಟೆ ಬಾರಿಸುತ್ತಿರುವ ಶ್ವಾನ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವಾಲಯದಲ್ಲಿ ಅತ್ಯಂತ ಶ್ರದ್ಧೆಯಿಂದ ಘಂಟೆ ಬಾರಿಸುತ್ತಿರುವ ಶ್ವಾನ: ವಿಡಿಯೋ ವೈರಲ್​

ನಾಯಿಗಳ ಆಟೋಟಕ್ಕೆ ಲೆಕ್ಕವೇ ಇಲ್ಲ. ತನ್ನ ಮಾಲೀಕ ಹೇಳಿಕೊಟ್ಟಂತೆ ಚಾಚೂತಪ್ಪದೇ ಮಾಡುವಲ್ಲಿ ನಾಯಿಗಳದ್ದು ಎತ್ತಿದ ಕೈ. ಇಷ್ಟೇ ಅಲ್ಲದೇ, ಪೊಲೀಸ್ ಇಲಾಖೆ, ಮಿಲಿಟರಿ ಎಲ್ಲವುಗಳಲ್ಲಿ ನಾಯಿಗಳಿಗೆ ಭಾರಿ ಡಿಮ್ಯಾಂಡ್. ಇದೇ ರೀತಿ ನಾಯಿಯೊಂದರ ಅಪರೂಪದ ವಿಡಿಯೋ ಒಂದು ವೈರಲ್​ ಆಗಿದ್ದು ಇದಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದೆ.

ಈ ವೈರಲ್​ ವಿಡಿಯೋದಲ್ಲಿ ನಾಯಿಯೊಂದು ಸಂತೋಷದಿಂದ ದೇವಾಲಯದಲ್ಲಿ ಗಂಟೆ ಬಾರಿಸುತ್ತಿರುವುದನ್ನು ಕಾಣಬಹುದಾಗಿದೆ. ತನ್ನ ಬಾಯಿಯಿಂದ ಘಂಟೆಗೆ ಕಟ್ಟಿರುವ ಹಗ್ಗವನ್ನು ಹಿಡಿದುಕೊಂಡು ಅದು ಖುಷಿಯಿಂದ ಗಂಟೆ ಬಾರಿಸುತ್ತಿದೆ.

ಈ ಚಿಕ್ಕ ವಿಡಿಯೋ ಇದಾಗಲೇ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಈ ಮುದ್ದಾದ ಭಕ್ತನಿಗೆ ದೇವರೂ ಮನಸೋಲದೇ ಇರುವುದಿಲ್ಲ ಎಂದು ನೆಟ್ಟಿಗರು ಕಮೆಂಟ್​ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಾಯಿಗಳು ಏನೆಲ್ಲಾ ಕಾರ್ಯಗಳನ್ನು ಮಾಡುವುದನ್ನು ನೋಡಿದ್ದೇವೆ. ಆದರೆ ಈ ರೀತಿ ಘಂಟೆ ಬಾರಿಸುತ್ತಿರುವುದನ್ನು ನೋಡುತ್ತಿರುವುದು ಇದೇ ಮೊದಲು ಎಂದು ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...